ಕಲಬುರಗಿ: ಕಲ್ಯಾಣಕರ್ನಾಟಕ ಭಾಗದ ಹವಾಗುಣಕ್ಕೆ ಹೊಂದುವ ವಿವಿಧ ಹಣ್ಣಿನ ಬೆಳೆಗಳು ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಲಭ್ಯವಾಗುವಂತೆ ಗುಣಮಟ್ಟದ ಕಸಿ ಗಿಡಗಳ ಪ್ರಾತ್ಯಕ್ಷಿಕೆ ಕ್ಷೇತ್ರಕ್ಕೆ ರಾಯಚೂರು ಕೃ.ವಿ.ವಿ. ಕುಲಪತಿಗಳಾದ ಡಾ.ಕೆ.ಎನ್. ಕಟ್ಟಿಮನಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ರೈತರಿಗೆ ಕೃಷಿ ಹೊಂಡದ ಸುತ್ತ ಹಾಗೂ ಜಮೀನುಗಳಲ್ಲಿ ಆದಾಯತರಬಲ್ಲ ಹಾಗೂ ಪೋಷಕಾಂಶವುಳ್ಳ ಹಣ್ಣಿನ ಗಿಡಗಳು ಬೆಳೆಯಲು ಉತ್ತೇಜಿಸಬೇಕು. ಕೃಷಿ ಮತ್ತುತೋಟಗಾರಿಕೆಗೆ ವಿಪುಲ ಅವಕಾಶಗಳಿದ್ದು ವಿವಿಧ ಮಾದರಿಯ ಹಣ್ಣಿನತೋಟವನ್ನು ಕೆವಿಕೆ ಕ್ಷೇತ್ರದಲ್ಲಿ ಬೆಳೆಸಲು ಸಲಹೆ ನೀಡಿದರು.
ವಲಯ ಸಂಶೋಧನ ನಿರ್ದೇಶಕರಾದ ಡಾ.ಜಿ.ಆರ್. ಪಾಟೀಲ್ (ಡೀನ್ ಕೃಷಿ), ಡಾ. ಸುರೇಶ ಪಾಟೀಲ್ ಡೀನ್,ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ರಾಜು ಜಿ. ತೆಗ್ಗಳ್ಳಿ, ವಿಜ್ಞಾನಿಗಳಾದ ಡಾ. ವಾಸುದೇವ ನಾಯ್ಕ್, ಡಾ.ರಾಚಪ್ಪಾ ಹಾವೇರಿ, ಡಾ. ಆನಂದ ನಾಯಕ್, ಡಾ.ಜಹೀರ್‌ಅಹೆಮದ್, ಡಾ. ಯುಸುಫ್‌ಅಲಿ, ಡಾ. ಶ್ರೀನಿವಾಸ ಬಿ.ವಿಹಾಗೂ ಆವರಣದಎಲ್ಲಾ ವೈಜ್ಞಾನಿಕ ಹಾಗೂ ತಾಂತ್ರಿಕ ಸಿಬ್ಬಂದಿಗಳು ಸಸಿ ನಾಟಿಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.