ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಯು ತನ್ನ ಅಟ್ಟಹಾಸ ಮುಂದುವರೆಸಿದ್ದು, ಜನರು ಲಾಕ್ ಡೌನ್ ಸಡಿಲಿಕೆಗೆ ಅಪಾರ್ಥ ಮಾಡಿಕೊಳ್ಳದೆ ಕಡ್ಡಾಯವಾಗಿ ಕೋವಿಡ್-19 ನಿಯಮ ಪಾಲಿಸಿ ಜೀವ ರಕ್ಷಿಸಿಕೊಳ್ಳುವ ಅಗತ್ಯವಿದೆ ಹೀಗಾಗಿ ಸಾರ್ವಜನಿಕರು ಜಾಗೃತರಾಗಬೇಕೆಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ. ಮೊಹಮ್ಮದ್ ಅಜಗರ್ ಚುಲಬಲ್ ಮನವಿ ಮಾಡಿದ್ದಾರೆ.
ಲಾಕ್ ಡೌನ್ ಸಡಿಲಿಕೆಯಿಂದ ಸಾರ್ವಜನಿಕ ಪ್ರದೇಶದಲ್ಲಿ ಕೊರೊನಾ ತಡೆಯುವ ನಿಯಮಗಳು ಪಾಲನೆಯಾಗುತ್ತಿಲ್ಲ, ಜನರು ಮಾಸ್ಕ್ ಧರಿಸದೇ ರಸ್ತೆಯಲ್ಲಿ ಓಡಾಟ ನಡೆಸುತ್ತಿದ್ದಾರೆ. ಹೊಟೇಲ್ ಗಳಲ್ಲಿ ಒಂದೆ ಕಪ್ ನಲ್ಲಿ ಹಲವಾರು ಜನ ಟೀ ಸೇವಿಸಿ ಮಹಾಮಾರಿಗೆ ಅಹ್ವಾನ ನೀಡುತ್ತಿದ್ದಾರೆ.
ಬಟ್ಟೆ ವ್ಯಾಪಾರಿಗಳು ಕೋವಿಡ್-19 ನಿಯಮ ಪಾಲಿಸದೆ, ಬಟ್ಟೆ ಟ್ರಯಲ್ ರೂಮ್ ಸ್ಯಾನಿಟೈಜ್ ಮಾಡದೆ ಇನ್ನೊಬ್ಬರಿಗೆ ಟ್ರಯಲ್ ಗೆ ಅವಕಾಶ ನೀಡಲಾಗುತ್ತಿದೆ. ಅದೇ ರೀತಿ ಜಿಲ್ಲೆಯಲ್ಲಿ ಮದುವೆ ಸಮಾರಂಭಗಳಿಗೆ ಅನುಮತಿ ಕಡ್ಡಾಯವಾಗಿದೆ. ಆದರೆ ಇವುಗಳ ನಿಯಮ ಪಾಲನೆಯಾಗುತ್ತಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಳದೆ ಫಂಕ್ಷನ್ ಹಾಲ್ ಗಳಲ್ಲಿ ಹೆಚ್ಚು ಜನರು ಸೇರುತ್ತಿರುವುದು ಆತಂಕ್ಕೆ ಎಡೆಮಾಡಿಕೊಟ್ಟಿದೆ.
ವಿಶ್ವವೇ ಕೊರೊನಾದಿಂದ ತತ್ತರಿಸುತ್ತಿದ್ದ ದೇಶದಲ್ಲಿ ಪ್ರತಿ ದಿನ ಪೀಡಿತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುತ್ತಿದೆ, ದೇಶದಲ್ಲೇ ಕೊರೊನಾಗೆ ಬಲಿಯಾದ ಮೊದಲ ವ್ಯಕ್ತಿ ಕಲಬುರಗಿ. ಜನರು ಆತಂಕ ಪಡದೆ, ಕೊರೊನಾ ಚಿಕಿತ್ಸೆ ಖಾಸಗೀಕರಣಗೊಳಿಸಿ ಚಿಕಿತ್ಸೆ ಹೆಸರಲ್ಲಿ ಆಸ್ಪತ್ರೆಗಳು, ಬಡ ಜನರಿಂದ ಲಕ್ಷ ಲಕ್ಷ ಹಣ ಲೂಟಿಗೆ ಸರಕಾರ ಮುಂದಾಗಿದೆ. – ಡಾ ಮೊಹಮ್ಮದ್ ಅಜಗರ್ ಚುಲಬುಲ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕಲಬುರಗಿ.
ಸಾರ್ವಜನಿಕರು ಕೊರೊನಾ ವಿರುದ್ಧ ಎಚ್ಚರಿಕೆ ವಹಿಸಿ ತನ್ನನ್ನು ರಕ್ಷಿಸಿಕೊಳ್ಳುವ ಜೊತೆ ತನ್ನ ಸಂಪತ್ತು ಮತ್ತು ಕುಟುಂಬ ಹಾಗೂ ಬಡಾವಣೆ, ಜಿಲ್ಲೆಯ ಸಂರಕ್ಷಿಸಬೇಕೆಂದು ಜಿಲ್ಲೆ ನಿವಾಸಿಗಳಿಗೆ ಮನವಿ ಮಾಡಿದ್ದಾರೆ.