ಶಹಾಬಾದ: ತಾಮೂಕಿನ ಮರತೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕೋವಿಡ್-೧೯ ಮಹಾಮಾರಿ ಕರೊನಾ ವಾರಿಯರ‍್ಸ್‌ಗೆ ಮತ್ತು ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ನೀಡಿ, ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ, ಸಹಕಾರ ಸಂಘದ ಉಪನಿಬಂಧಕ ಸಿ.ಎಸ್.ನಿಂಬಾಳ ಇಂದು ಕೊರೊನಾ ಹಾವಳಿ ಜಗತ್ತನ್ನು ನಡುಗಿಸಿದೆ.ನಿತ್ಯವೂ ಸಾವಿರಾರು ಜನರು ಸಾಯುತ್ತಿದ್ದಾರೆ.ಲಕ್ಷಾಂತರ ಜನರು ಸೊಂಕಿನಿಂದ ಬಳಲುತ್ತಿದ್ದಾರೆ.ಇಂತಹ ಅಪಾಯದ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಹಗಲಿರುಳು ಜನರಿಗಾಗಿ ಸೇವೆ ಮಾಡುತ್ತಿರುವ ಕೊರೊನಾ ವಾರಿಯರ‍್ಸ್ ಸೇವೆ ಅವಿಸ್ಮರಣೀಯವಾಗದುದು ಎಂದು ಹೇಳಿದರು.
ಸೇಡಂನ ಸಹಾಯಕ ನಿಬಂಧಕ ರವೀಂದ್ರ ಗುರುಮಿಠಕಲ್,ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಮಧ್ವರಾಜ, ಮರತೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರವೀಂದ್ರ ನರೋಣಿ, ಉಪಾಧ್ಯಕ್ಷ ಕರಬಸಪ್ಪ ರಾಯನಾಡ, ಕಾರ್ಯನಿರ್ವಾಹಕ ಅಧಿಕಾರಿ ಈರಣ್ಣ.ಎಸ್.ಬುಕ್ಕನ್,ಗ್ರಾಪಂ ಕಾರ್ಯದರ್ಶಿ ಅಣ್ಣಾಸಾಬ ಪಾಟೀಲ,
ಶ್ಯಾಮರಾಯಗೌಡ ಮಾಲಿಪಾಟೀಲ, ವಿದ್ಯಾಸಾಗರ ಪಾಟೀಲ, ಸಿದ್ದಲಿಂಗ ಬೊಮ್ಮನಳ್ಳಿ,ಶಮಶೀರ ಗೊಳೇದ್,ಶರಣಬಸಪ್ಪ ಪಟ್ಟೇದ್,ಚಂದ್ರಶೇಖರ ಪಾಟೀಲ, ಗುರುನಾಥ ಕಂಬಾ,ಗುಂಡಪ್ಪ ವಿಶ್ವಕರ್ಮ, ನೀಲಕಂಠ ಕೊಂಡಗುಳ ಇತರರು ಇದ್ದರು.
ಐದು ಜನ ಆಶಾ ಕಾರ್ಯಕರ್ತರಿಗೆ ತಲಾ ೩೦೦೦ರೂ. ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಯಿತು.