ಮುಂಗಾರಿನ ಚಪ್ಪರದ ಮೇಲೆ ಅಪ್ಪನು ಇರಬಹುದು ಭೇಟಿಯಾಗಿ ಉಭಯ ಕುಶಲೋಪರಿ ನೆಡಸಿರಿ

0
131

ಕಲಬುರಗಿ: ತಮ್ಮ ‘ ಬದುಕು’ ಕಾದಂಬರಿಯ ಮೂಲಕ ಬಿಸಿಲು ನಗರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಮೊದಲ ಬರಹಗಾರ್ತಿ ಶ್ರೀಮತಿ ಗೀತಾ ನಾಗಭೂಷಣ್ ಮೇಡಂ ಹೃದಯಾಘಾತದಿಂದ ಅಗಲಿದ್ದಾರಂತೆ. ಅಲ್ಲೇ ಪಕ್ಕದ ಮನೆಯಲ್ಲಿ ವಾಸವಿರುವ ನಮ್ಮ ಮಾಮ ಫೋನ್ ಮಾಡಿ ವಿಷಯ ತಿಳಿಸಿದರು. ವಿಷಯ ತಿಳಿದು ಮಮ್ಮಲ ಮರುಗಿದೆ . ನಾನು ಸಾಕಷ್ಟು ಬಾರಿ ಅವರಿಗೆ ಭೇಟಿಯಾಗಿದ್ದೆ. ಅಪ್ಪನ ಕೃತಿಗೆ ಬೆನ್ನುಡಿ ಬರೆಸಿಕೊಳ್ಳುವ ಸಲುವಾಗಿ ಖುದ್ದು ನಾನಾಗೆ ಹೋಗಿ ತಾಸೊಪ್ಪತ್ತು ಕುಳಿತು ಸಾಹಿತ್ಯ ಕುರಿತಾಗಿ ಚರ್ಚೆ ಮಾಡಿದ್ದು ಇನ್ನು ನೆನಪು ಮಾತ್ರ. ಇಲ್ಲಿ upload ಮಾಡಿರುವ ಚಿತ್ರ ವರ್ಷದ ಹಿಂದಿದ್ದು. ಹೊಸದಾಗಿ ಸರ್ಕಾರಿ ಶಿಕ್ಷಕ ಕೆಲಸ ಗಿಟ್ಟಿಸಿಕೊಂಡಿದ್ದ ನಂತರ ಬುನಾದಿ ತರಬೇತಿಗೆ ಅಂತಾ ಕಲಬುರ್ಗಿಯಲ್ಲಿ 10 ದಿವಸಗಳ ಕಾಲ ಮಾವನ ಮನೆಯಲ್ಲಿ ಬಿಡು ಬಿಟ್ಟಿದ್ದೆ. ತರಬೇತಿಯಲ್ಲಿ ದಿನಂಪ್ರತಿ ಒಂದು ಗುಂಪು ಏನಾದರೂ ಚಟುವಟಿಕೆ ಮಾಡಬೇಕಿತ್ತು ಆ ಕಾರಣಕ್ಕಾಗಿ ನಾನು ‘ಮಹಿಳೆ ಅಬಲೆ ಅಲ್ಲಾ ಸಬಲೆ’ ಎನ್ನುವಂಥ ವಿಷಯ ಇಟ್ಟುಕೊಂಡು ಹಲವಾರು ಮಹಿಳಾ ಸಾಧಕಿಯರ ಜೊತೆ ಇವರ ಕುರಿತಾಗಿಯು ಮಾತನಾಡಿದ್ದೆ. ಹೋಗಿ ಬನ್ನಿ ಮೇಡಂ ಸಾಧ್ಯವಾದರೆ , ಮುಂಗಾರಿನ ಚಪ್ಪರದ ಮೇಲೆ ಅಪ್ಪನು ಇರಬಹುದು ಭೇಟಿಯಾಗಿ ಉಭಯ ಕುಶಲೋಪರಿ ನೆಡಸಿರಿ….

-ಶಿವಪ್ರಸಾದ ಕರದಳ್ಳಿ

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here