ಕಲಬುರಗಿ: ಕುರಿ ಸಾಕಾಣಿಕೆ ಜೊತೆಗೆ ಜಲಸಂರಕ್ಷಣೆ ಹಾಗೂ ನೀರು ಇಂಗಿಸಿ ತಮ್ಮ ಊರಿನ ಸುತ್ತಮುತ್ತಲ ಗುಡ್ಡಗಳಲ್ಲಿ ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರು ಸಿಗಲಿ ಎಂಬ ಆಶಯದಿಂದ 16 ಎಕರೆ ಕೆರೆ ನಿರ್ಮಾಣ ಮಾಡಿದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸರದೊಡ್ಡಿ ಗ್ರಾಮದ ಮಾದರಿ ರೈತ ಕಾಮೇಗೌಡರ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಯವರು ಹೃದಯ ಪೂರ್ವಕ ತಮ್ಮ “ಮನ್ ಕಿ ಬಾತ್” ಕಾರ್ಯಕ್ರಮದಲ್ಲಿ ಅಭಿನಂದಿಸಿರುವುದು ರಾಜ್ಯದ ರೈತರಿಗೆ ಪ್ರೇರಣಾದಾಯಕ ವಾಗಲಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಅಂಬಾರಾಯ ಅಷ್ಠಗಿ ಹೇಳಿದ್ದಾರೆ.
ಕಾಮೇಗೌಡರ ಈ ಕಾರ್ಯವು ನಮಗೆಲ್ಲರಿಗೂ ಪ್ರೇರಣಾದಾಯಕ ಹಾಗೂ ಮಾದರಿಯಾಗಿದೆ. ಇಂದು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಉಲ್ಲೇಖಿಸುತ್ತಾ, ಕಾಮೇಗೌಡರು ಕಟ್ಟಿರುವ ಈ ಕೆರೆಗಳು ಬಹಳ ದೊಡ್ಡದಾಗಿರಲಿಕ್ಕಿಲ್ಲ, ಆದರೆ ಅವರ ಪ್ರಯತ್ನ ಬಹಳ ದೊಡ್ಡದು ಎಂದು ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿರುವುದು ಸಂತಸ ತಂದಿದೆ.
ಮಾದರಿ ರೈತರಾದ ಕಾಮೇಗೌಡರಿಗೆ ಹಾಗೂ ಪ್ರೇರಣೆ ನೀಡುವ ಮಹನೀಯರನ್ನು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶಕ್ಕೆ ಪರಿಚಯಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಇಂತಹ ಉತ್ತಮ ಕೆಲಸಗಳನ್ನು ಜನರ ಗಮನಕ್ಕೆ ತರುತ್ತಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಹಾಗೂ ಶಾಸಕರಾದ ಎನ್.ರವಿಕುಮಾರ ಅವರಿಗೂ ಅಂಬಾರಾಯ ಅಷ್ಠಗಿ ಧನ್ಯವಾದಗಳನ್ನು ಹೇಳಿದ್ದಾರೆ.