12 ವರ್ಷಗಳ ವನವಾಸದ ನಂತರ ನನಸಾದ ನೀರಿನ ಕನಸು

0
60

ಬಳ್ಳಾರಿ: ನಗರದ ನಿವಾಸಿಗಳ ಕನಸು ಈಗ ನನಸಾಗಿದೆ. 24 ಗಂಟೆಯೂ ನೀರು ಪೂರೈಕೆ ಯೋಜನೆಯ ಅನುಷ್ಟಾನಕ್ಕೆ ಇಂದು ಚಾಲನೆ ದೊರಕಲಿದೆ. ಬಳ್ಳಾರಿ ನಗರದ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಸಚಿವ ಭೈರತಿ ಬಸವರಾಜ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಬಳ್ಳಾರಿ ನಗರದಲ್ಲಿ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ. ಅನೇಕ ವರ್ಷಗಳಿಂದ ನೀರಿನ ಸಮಸ್ಯೆಯನ್ನು ಎದುರುಸಿತ್ತಾ ಬಂದಿರುವ ಬಳ್ಳಾರಿಯಲ್ಲಿ ಶಾಶ್ವತ ಪರಿಹಾರ ಕೊಡುವ ನಿಟ್ಟಿನಲ್ಲಿ ಮೊಟ್ಟ ಮೊದಲ ಬಾರಿಗೆ 2008ರಲ್ಲಿ ಭಾರತೀಯ ಜನತಾ ಪಕ್ಷದ ಸರಕಾರ ಅಸ್ಥಿತ್ವದಲ್ಲಿದ್ದಾಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂಧರ್ಬದಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಪ್ರಭಾವಿ ರಾಜಕಾರಣಿ ಗಾಲಿ ಜನಾರ್ಧನ ರೆಡ್ಡಿಯವರು ಅಂದು ಕಂಡ ಕನಸು ಹಲವು ಅಡೆತಡೆಗಳನ್ನು ಕಂಡು ಇಂದು ನನಸಾಗಿದೆ.

Contact Your\'s Advertisement; 9902492681

2008ರಲ್ಲಿ ಸಿಕ್ಕ 24*7 ನೀರು ಪೂರೈಕೆ ಚಾಲನೆಗೆ ತದ ನಂತರದ 5 ವರ್ಷಗಳಲ್ಲಿ ಕಾಮಗಾರಿಗೆ ಬಿರುಸಿನ ಚಾಲನೆ ದೊರೆತಿರಲಿಲ್ಲ. ಶಾಸಕ ಸೋಮಶೇಖರ ರೆಡ್ಡಿ ಸತತವಾಗಿ ಕಾಮಗಾರಿ ಅನುಷ್ಠಾನದ ಬಗ್ಗೆ ಧ್ವನಿ ಏತ್ತುತ್ತಲೇ ಬಂದರು. ಸರಕಾರ ಅಸ್ಥಿತ್ವದಲ್ಲಿ ಇಲ್ಲದಿದ್ದರೂ ಹಾಲಿ ಶಾಸಕ ಸೋಮಶೇಖರ ರೆಡ್ಡಿ ಈ ಯೋಜನೆಯ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ಮಾಡುತ್ತಲೇ ಇದ್ದರು.

ಇಂದು ಅದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುವ ಈ ಸಂಧರ್ಬದಲ್ಲಿ ಗಾಲಿ ಜನಾರ್ಧನ ರೆಡ್ಡಿಯವರ ಕನಸನ್ನು ನನಸು ಮಾಡು ನಿಟ್ಟಿನಲ್ಲಿ ಅವರ ಸಹೋದರ,ನಗರದ ಹಾಲಿ ಶಾಸಕ ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ ನಡೆಯುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಉಂಟು ಮಾಡಿದೆ.

2008ರಲ್ಲಿ ಪ್ರಭಾವಿ ಸಚಿವರಾಗಿದ್ದ ಗಾಲಿ ಜನಾರ್ಧನ ರೆಡ್ಡಿ ಮತ್ತು ಹಾಲಿ ಆರೋಗ್ಯ ಸಚಿವರಾದ ಬಿ ಶ್ರೀರಾಮುಲು ಅವರು ಬಳ್ಳಾರಿಗೆ ಅನೇಕ ಯೋಜನೆಗಳನ್ನು ತರುವಲ್ಲಿ ಯಶಸ್ವಿಯಾಗಿದ್ದರು.ಆದರೆ ತದನಂತರದ ದಿನಗಳಲ್ಲಿ ಯೋಜನೆಗೆ ಹಲವು ಅಡೆತಡೆಗಳು ಉಂಟಾಗಿ ತಟಸ್ಥಗೊಂಡಿದ್ದ ಯೋಜನೆಗಳಿಗೆ ಇಂದು ಒಂದೊದೆ ಯೋಜನೆಗಳಿಗೆ ಚಾಲನೆ ಸಿಗುತ್ತಿವೆ. ಹಾಲಿ ಸರ್ಕಾರದಲ್ಲಿ ಸಚಿವ ಬಿ ಶ್ರೀರಾಮುಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿರದ್ದು,ಸೋಮಶೇಖರ ರೆಡ್ಡಿ ಶಾಸಕರಾಗಿದ್ದು ಅಂದು 2008ರಲ್ಲಿ ಜನಾರ್ಧರೆಡ್ಡಿ ಅವರು ಜಿಲ್ಲಾ ಉಸ್ತುವಾರಿ ಸಚಿರಾಗಿದ್ದ ಸಂದರ್ಭದಲ್ಲಿ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳಿಗೆ ಮತ್ತೆ ಚಾಲನೆ ಸಿಕ್ಕಿರುವುದಕ್ಕೆ ಜಿಲ್ಲೆಯ ಜನತೆ ಮತ್ತು ರೆಡ್ಡಿಯವರ ಅಭಿಮಾನಿಗಳು ಹರ್ಷವ್ಯಕ್ತಪಡಿಸುತ್ತಿದ್ದಾರೆ.

ನೀರಿನ ಯೋಜನೆಯಂತೆ ಅನೇಕ ಇನ್ನೂ ಹಲವು ಯೋಜನೆಗಳು ರಿಂಗ್ ರಸ್ತೆ, ಸೂಪರ್ ಸ್ಪೇಶಾಲಿಟಿ ಹಾಸ್ಪಿಟಲ್,ಬಳ್ಳಾರಿ ವಿಮಾನ ನಿಲ್ದಾಣದಂತಹ ಅನೇಕ ಯೋಜನಗಳಿಗೆ ಆದಷ್ಟು ಬೇಗನೆ ಚಾಲನೆ ದೊರೆಯಲಿ, ಜನಾರ್ಧನ ರೆಡ್ಡಿ ಅಂದು ಹಾಕಿಕೊಟ್ಟ ಕನಸಿನ ಯೋಜನೆಗಳು ನನಸಾಗಲಿ ಎಂದು ಬಳ್ಳಾರಿ ಜನತೆ ಆಶೀಸುತ್ತಿದ್ದಾರೆ.
ರಾಜಕೀಯ ಇಚ್ಚಾಶಕ್ತಿ ಇದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಅನೇಕ ಉದಾಹರಣೆಗಳಿವೆ.ಈ ಹಿಂದೆ ಬಳ್ಳಾರಿ 2008ರಲ್ಲಿ ಸ್ವಾತಂತ್ರ್ಯ ನಂತರವೆ ಕಂಡಿರದ ರೀತಿಯಲ್ಲಿ ಅನೇಕ ಅಭಿವೃದ್ದಿಗಳನ್ನು ಕಂಡಿತು.

ರಸ್ತೆಗಳ ನಿರ್ಮಾಣ, ರಿಂಗ್ ರಸ್ತೆಗಳು,ಹೈಮಾಸ್ಟ್ ಲೈಟ್ ಗಳು,ಪಾರ್ಕಗಳು,ಹಲವು ನಾಡಿನ ದಿಗ್ಗಜರ ಪ್ರತಿಮೆಗಳು ಹೀಗೆ ಹತ್ತು ಹಲವು ಅಭಿವೃದ್ದಿಗಳಲ್ಲಿ 2008ರಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದ್ದ ಬಳ್ಳಾರಿ ಜಿಲ್ಲೆ, ತದನಂತರದ ದಿನಗಳಲ್ಲಿ ಕೊಂಚ ಮಟ್ಟಿಗೆ ಹಿನ್ನಡೆ ಸಾಧಿಸಿತ್ತು, ಈಗ ಆ ಯೋಜನೆಗಳಿಗೆ ಚಾಲನೆ ಸಿಗುತ್ತಿರುವುದು ಜಿಲ್ಲೆಯ ಜನತೆಯಲ್ಲಿ ಹರ್ಷ ತಂದಿದೆ. ಜಿಲ್ಲೆಯ ಅಭಿವೃದ್ಧಿಗೆ ಕಾರಣೀಭೂತರಾದ ಜನಾರ್ಧನರೆಡ್ಡಿ ಅವರನ್ನು ಜಿಲ್ಲೆಯ ಜನತೆ ಅಭಿನಂದಿಸುತ್ತಿದ್ದಾರೆ.

ಪಕ್ಷ ಯಾವುದೆ ಇರಲಿ ಶಾಸಕರು, ಸಚಿವರು ಯಾರೆ ಆಗಿರಲಿ ರಾಜಕೀಯ ಇಚ್ಚಾಶಕ್ತಿ ಇದ್ದರೆ ಯೋಜನೆ ಅನುಷ್ಟಾನಕ್ಕೆ ಬರುತ್ತಿರುವುದಕ್ಕೆ ಈ ಯೋಜನೆ ಸಾಕ್ಷಿಯಾಗಿದೆ. ತಮ್ಮ ಅಧಿಕಾರದ ಅವಧಿಯಲ್ಲಿಯೇ ಈ ಯೋಜನೆಗೆ ಚಾಲನೆ ಕೊಡಿಸುತ್ತಿರುವ ಶಾಸಕ ಸೋಮಶೇಖರ ರೆಡ್ಡಿ ನಿಜಕ್ಕೂ ಇಂದು ಈ ಯೋಜನೆಯ ಅನುಷ್ಠಾನದಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 90.55 ಕೋಟಿ ರೂಪಾಯಿ ವೆಚ್ಚದ 446 ಕಿಲೋ ಮೀಟರ ಪೂರ್ಣಗೊಂಡ ಪೈಪಲೈನ್ ವಿಸ್ತೀರ್ಣ, 28 ವಲಯಗಳಲ್ಲಿ ಅನುಷ್ಠಾನದ ಯೋಜನೆ, ಅದರಲ್ಲಿ 12 ವಲಯಗಳಲ್ಲಿ ಪೂರ್ಣಗೊಂಡ ಅನುಷ್ಠಾನ. ಒಟ್ಟು ಬಳ್ಳಾರಿ ನಗರದ ಜನತೆಗೆ ಕುಡಿಯುವ ನೀರಿನ ಬವಣೆ ಹಿಂಗಿಸುವ ನಿಟ್ಟಿನಲ್ಲಿ ಹಾಕಿಕೊಂಡಿದ್ದ, ಪ್ರಮುಖ ಯೋಜನೆಯೊಂದು ಜನರಿಗೆ ಸಮರ್ಪಿತವಾಗುತ್ತಿರುವುದು ಸಂತಸದ ಸಂಗತಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here