ಕಲಬುರಗಿ: ಜಿಲ್ಲೆಯ ಶಾಹಬಾದ್ ತಾಲ್ಲೂಕಿನ ಬಂಕುರು ಗ್ರಾಮದಲ್ಲಿ ಬಸವ ಸಮಿತಿ ಪ್ರೌಡ ಶಾಲೆಯ SSLC ಪರೀಕ್ಷೆ ಕೇಂದ್ರದಲ್ಲಿ ವಿದ್ಯರ್ಥಿಗಳಿಗೆ ಹೋಸ ಪಾಠ್ಯಕ್ರಮದ ಪ್ರೆಶ್ನೆ ಪತ್ರಿಕೆ ಬದಲು 2017 ನೇ ಸಾಲಿನ ಹಳೆಯ ಪಾಠ್ಯಕ್ರಮ ಪ್ರಶ್ನೆ ಪತ್ರಿಕೆಯನ್ನು ಕೊಟ್ಟು ವಿದ್ಯಾರ್ಥಿಗಳ ಭವಿಷ್ಯದ ಜೋತೆ ಚೆಲ್ಲಾಟ ನಡೆಸುತ್ತಿದ್ದಾರೆ ಎಂದು SFI ಜಿಲ್ಲಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಶಿಕ್ಷಣ ಇಲಾಖೆಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಪೊಷಕರು ಆತಂಕಕ್ಕೆ ಒಳಗಾಗಿದ್ದಾರೆ. ವಿಧ್ಯಾರ್ಥಿಗಳ ಭವಿಷ್ಯ ಹಾಳಗಾದಂತೆ ಮತ್ತು ಮರು ಪರೀಕ್ಷೆಗೆ ಅವಕಾಶ ಕಲ್ಪಿಸಿ, ಅವಕಾಶವಿದ್ದರೆ ನೇರವಾಗಿ ಉತ್ತೀರ್ಣಗೊಳಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಪರೀಕ್ಷಾ ಕೇಂದ್ರದಲ್ಲಿ ಈ ವೇಳೆ ಕಾರ್ಯನಿರ್ವಹಿಸುತ್ತಿರುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಜಿಲ್ಲಾಧಿಕಾರಿ ಮುಖಾಂತರ ಶಿಕ್ಷಣ ಇಲಾಖೆಗೆ ಮನವಿ ಇಂದು ಮನವಿ ಪತ್ರ ಸಲ್ಲಿಸಿದರು.