ಬಾಡಿಗೆ ಆಧಾರದ ಮೇಲೆ ವಾಹನ ಪೂರೈಸಲು ಟ್ರಾವೆಲ್ ಏಜೆನ್ಸಿಗಳಿಂದ ಟೆಂಡರ್ ಆಹ್ವಾನ

0
52

ಕಲಬುರಗಿ: ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರ ಕಚೇರಿಗೆ 2020-21ನೇ ಸಾಲಿನಲ್ಲಿ (ಟಾಟಾ ಸುಮೋ, ತವೇರಾ, ಟಾಟಾ ಇಂಡಿಗೊ, ಇಂಡಿಕಾ ವಿಸ್ಟಾ, ಮಹೀಂದ್ರ ಝೈಲೋ, ಸ್ವಿಫ್ಟ್/ಲೋಗಾನ್-2016 ಹಾಗೂ ನಂತರದ ಮಾದರಿಯ ವಾಹನ) ನಾಲ್ಕು ಚಕ್ರದ ವಾಹನವನ್ನು ಬಾಡಿಗೆ ಆಧಾರದ ಮೇಲೆ ಪಡೆಯಲು ಟ್ರಾವಲ್ ಏಜೆನ್ಸಿಗಳಿಂದ ಟೆಂಡರ್ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರು ತಿಳಿಸಿದ್ದಾರೆ.

ಟ್ರಾವೆಲ್ ಏಜೆನ್ಸಿಯವರು 2020ರ ಆಗಸ್ಟ್ 1ರಿಂದ 2021ರ ಮಾರ್ಚ್ 31ರ ವರೆಗಿನ ಅವಧಿಗೆ ಮಾತ್ರ ವಾಹನ ಪೂರೈಸಬೇಕು. ಅರ್ಹ ಆಸಕ್ತ ಟ್ರಾವೆಲ್ ಏಜೆನ್ಸಿಯವರು https://eproc.Karnataka.gov.in ಇ-ಫ್ರಕ್ಯೂರ್‍ಮೆಂಟ್ ಪೆÇೀರ್ಟಲ್ ಮುಖಾಂತರ ಟೆಂಡರ್‍ನಲ್ಲಿ ಭಾಗವಹಿಸಬೇಕು.

Contact Your\'s Advertisement; 9902492681

ಷರತ್ತು ಹಾಗೂ ನಿಬಂಧನೆ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಿನಿ ವಿಧಾನಸೌಧದ ಮೂರನೇ ಮಹಡಿಯ ರೂಂ. ನಂ. 26 ರಲ್ಲಿನ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-221069ಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here