ಆಗಸ್ಟ್ 2ರವರೆಗೆ ಎಲ್ಲಾ ಭಾನುವಾರ ಪೂರ್ಣದಿನದ ಲಾಕ್‍ಡೌನ್ ಕಲಬುರಗಿ ಡಿಸಿ ಆದೇಶ

0
105

ಕಲಬುರಗಿ: ಕೋವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ 2020ರ ಜುಲೈ 5ರ ಭಾನುವಾರದಿಂದ ಮುಂದಿನ ಎಲ್ಲಾ ಭಾನುವಾರಗಳಂದು (2020ರ ಆಗಸ್ಟ್ 2 ರವರೆಗೆ) ಕಲಬುರಗಿ ಜಿಲ್ಲೆಯಾದ್ಯಂತ ಪೂರ್ಣದಿನದ ಲಾಕ್‍ಡೌನ್ ಹಾಗೂ ಎಲ್ಲ ತರಹದ ಮದ್ಯ ಮಾರಾಟವನ್ನು ನಿಷೇಧಿಸಿ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಆದೇಶ ಹೊರಡಿಸಿದ್ದಾರೆ.

ಇದಲ್ಲದೇ ತಕ್ಷಣ ಜಾರಿಗೆ ಬರುವಂತೆ ಪ್ರತಿದಿನ ರಾತ್ರಿ 8 ರಿಂದ ಬೆಳಗಿನ 5 ಗಂಟೆಯವರೆಗೆ ಸಂಪೂರ್ಣ ಲಾಕ್‍ಡೌನ್ ಇದ್ದು, ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕೆಂದು ಆದೇಶ ಹೊರಡಿಸಿದ್ದಾರೆ.

Contact Your\'s Advertisement; 9902492681

ಲಾಕ್‍ಡೌನ್ ಪ್ರಯುಕ್ತ ಜಿಲ್ಲೆಯಾದ್ಯಂತ ರಾತ್ರಿ 8 ರ ನಂತರ ಅವಶ್ಯಕ ಸರಕು ಸಾಮಾಗ್ರಿ ಮತ್ತು ಸೇವೆಗಳನ್ನು ಹೊರತುಪಡಿಸಿ ಸಂಪೂರ್ಣ ಜಿಲ್ಲೆಯನ್ನು ಸ್ತಬ್ದಗೊಳಿಸಬೇಕು.

ಭಾನುವಾರ ಹೊರತುಪಡಿಸಿ ಉಳಿದ ದಿನಗಳಂದು ರಾತ್ರಿ 8ರ ನಂತರ ಎಲ್ಲ ತರಹದ ಮದ್ಯ ಮಾರಾಟವನ್ನು ಸಹ ನಿಷೇಧಿಸಿ ಡಿ.ಸಿ. ಶರತ್ ಬಿ. ಅವರು ಆದೇಶ ಹೊರಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here