ಡಾ.ಅಶೋಕ ದೊಡ್ಮನಿ ಹಂಗರಗಾ(ಕೆ)
ಜೇವರ್ಗಿ: ವಿಧಾನಸಭೆಯ ಮುಖ್ಶ ಸಚೇತಕ ಹಾಗೂ ಶಾಸಕ ಡಾ.ಅಜಯಸಿಂಗ್ ತವರಲ್ಲಿ ಸೇತುವೆ ಕೊಚ್ಚಿಕೊಂಡು ಹೋಗಿದ್ದುˌ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳು ಆತಂಕಕ್ಕೀಡಾಗಿದ್ದಾರೆ.
ಅಲ್ಲದೆ ಜನತಾ ಕಾಲೋನಿಗಳ ಮನೆಗಳಲ್ಲಿ ನೀರು ನುಗ್ಗಿ ಜನ ಥಂಡಿಯಲ್ಲಿದ್ದರೆˌ ಶಾಸಕರು ಬೆಂಗಳೂರಿನಲ್ಲಿದ್ದಾರೆ. ಸ್ಥಳಕ್ಕೆ ಹೋಗಬೇಕಾದ ಅಧಿಕಾರಿಗಳು ಕಲಬುರಗಿಯಲ್ಲಿದ್ದಾರೆ. ಇದು ಜೇವರ್ಗಿ ಪಟ್ಟಣದ ವಾಸ್ತವ ಸ್ಥಿತಿ.
ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹತ್ತಿರದ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಹಾಗೂ ವಸತಿ ಶಾಲೆಯ ಕಂಪೌಂಡ ರಾತ್ರಿ ಸುರಿದ ಮಳೆಗೆ ಕೊಚ್ಚಿಕೊಂಡು ಹೋಗಿದೆ.
ವಸತಿ ಶಾಲೆಯಲ್ಲಿ ಹಾಗೂ ಲೋಕೊಪಯೋಗಿ ಇಲಾಖೆಯ ವಸತಿ ಗ್ರಹಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲಿರುವ ಹಲವು ಮಕ್ಕಳಿದ್ದಾರೆ. ಅಲ್ಲದೆ ಬಡಾವಣೆಯ ಮುಖ್ಶರಸ್ತೆಯೂ ಇದಾಗಿದ್ದರಿಂದ ನಿವಾಸಿಗಳಿಗೆ ತೊಂದರೆಯಾಗಿದೆ.
ಮೂರಾರ್ಜಿ ದೇಸಾಯಿ ವಸತಿ ಶಾಲೆˌ ಲೋಕೋಪಯೋಗಿ ಇಲಾಖೆಯ ಕಚೇರಿˌ ಲೋಕೋಪಯೋಗಿ ಇಲಾಖೆಯ ವಸತಿ ಗ್ರಹಗಳುˌ ಬಾಲಕರ ವಸತಿ ನಿಲಯˌ ಹೋಂ ಕ್ವಾರಂಟೈನ್ ಕೇಂದ್ರಗಳಿವೆ.
ತಾಲೂಕಿನಾದ್ಶಂತ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುತ್ತೇವೆ ಎಂದು ಹೇಳುವ ಲೋಕೋಪಯೋಗಿ ಇಲಾಖೆನೇ ಸ್ವತಹ ತನ್ನ ಕಚೇರಿಗೆ ಹೋಗುವ ಸೇತುವೆ ಕಳಪೆ ಕಾಮಗಾರಿ ಮಾಡಿಸಿಕೊಂಡಿದೆ. ಶಾಸಕರ ಹಿಡಿತˌ ಕಠಿಣ ಕ್ರಮವೂ ಹಾಗೆ ಇದೆ.
ಸಂಬಂಧ ಪಟ್ಟವರು ಕೂಡಲೇ ಕ್ರಮ ವಹಿಸಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.