ಒಂದು ವಾರದಲ್ಲಿ ಇಂದಿರಾ ಕ್ಯಾಂಟಿನ್ ಆರಂಭಿಸದಿದ್ದಲ್ಲಿ ಬೀಗ ಮುದ್ರೆ: ಮಲ್ಲಿಕಾರ್ಜುನ ಕ್ರಾಂತಿ

0
51

ಸುರಪುರ: ಹಿಂದೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಜನೊಪಯೋಗಿ ಇಂದಿರಾ ಕ್ಯಾಂಟಿನ್ ಯೋಜನೆ ಜಾರಿಗೆ ತಂದಿದ್ದರು.ಆದರೆ ಸುರಪುರದಲ್ಲಿ ಇಲ್ಲಿಯವರೆಗು ಆರಂಭವಾಗಿಲ್ಲ.ಇನ್ನೊಂದು ವಾರದಲ್ಲಿ ಇಂದಿರಾ ಕ್ಯಾಂಟಿನ್ ಆರಂಭಿಸದಿದ್ದಲ್ಲಿ ನಗರಸಭೆಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮತಿ (ಕ್ರಾಂತಿಕಾರಿ ಬಣ) ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಎಚ್ಚರಿಸಿದರು.

Contact Your\'s Advertisement; 9902492681

ನಗರಸಭೆ ಕಾರ್ಯಾಲಯದ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಇಂದಿರಾ ಕ್ಯಾಂಟಿನ್ ಬಡ ಜನರಿಗೆ ವರದಾನವಾದ ಯೊಜನೆಯಾಗಿದೆ.ನಿತ್ಯವು ಸಾವಿರಾರು ಜನ ಗ್ರಾಮೀಣ ಭಾಗದಿಂದ ನಗರಕ್ಕೆ ಬರುತ್ತಾರೆ.ಅಂತಹ ಜನರಿಗೆ ಇಂದಿರಾ ಕ್ಯಾಂಟಿನ್ ತುಂಬಾ ಅವಶ್ಯಕವಾಗಿದೆ.ನಗರಸಭೆ ಪೌರಾಯುಕ್ತರಿಗೆ ಕೇಳಿದರೆ ಸ್ಥಳದ ಅಭಾವವಿದೆ ಎಂದು ಹೇಳುತ್ತಾರೆ.ಆದರೆ ನಗರಸಭೆ ಮುಂದೆಯೇ ಇರುವ ಜೆಸ್ಕಾಂ ಬಿಲ್ ಪಾವತಿ ಕೇಂದ್ರದ ಕಟ್ಟಡ ಖಾಲಿಯೆ ಇದ್ದು,ಅದರಲ್ಲಿ ಇಂದಿರಾ ಕ್ಯಾಂಟಿನ್ ಆರಂಭಿಸಲು ಯಾವುದೆ ತೊಂದರೆ ಇಲ್ಲ.ಆದ್ದರಿಂದ ಕೂಡಲೆ ಇಂದಿರಾ ಕ್ಯಾಂಟಿನ್ ಆರಂಭಿಸಬೇಕು,ಇಲ್ಲವಾದಲ್ಲಿ ಒಂದು ವಾರದ ನಂತರ ನಗರಸಭೆಗೆ ಬೀಗ ಮುದ್ರೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಂತರ ಪೌರಾಯುಕ್ತರಿಗೆ ಬರೆದ ಮನವಿಯನ್ನು ಸಿರಸ್ತೆದಾರ ಸಿದ್ರಾಮಪ್ಪ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಅಜೀಜ್ ಸಾಬ್ ಐಕೂರ,ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಿಗಿ,ಡಾ: ಮಲ್ಲಿಕಾರ್ಜುನ ಆಶನಾಳ,ಬುದ್ಧಿವಂತ ನಾಗರಾಳ,ಜೆಟ್ಟೆಪ್ಪ ನಾಗರಾಳ,ಮರಿಲಿಂಗಪ್ಪ ಹುಣಸಿಹೊಳೆ,ಖಾಜಾ ಹುಸೇನ್ ಗುಡಗುಂಟಿ,ಹುಲಗಪ್ಪ ಬೈಲಕುಂಟಿ,ಮರಲಿಂಗಪ್ಪ ನಾಟೆಕಾರ್,ಭೀಮಣ್ಣ ಕ್ಯಾತನಾಳ,ಬಸವರಾಜ ಶೆಳ್ಳಿಗಿ,ಮಹೇಶ ಸುಂಗಲಕರ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here