ಸುರಪುರ: ನಗರದ ಬಸ್ ಡಿಪೋದಲ್ಲಿನ ಚಾಲಕ ಮತ್ತು ನಿರ್ವಾಹಕರಿಗೆ ಕೊರೊನಾ ಸೊಂಕು ತಗುಲಿದ್ದರಿಂದ ಮೂರು ದಿನಗಳ ಕಾಲ ಬಸ್ ಡಿಪೋವನ್ನು ಸೀಲ್‌ಡೌನ್ ಮಾಡಲಾಗಿದೆ.ಈ ಕುರಿತು ತಾಲೂಕು ಆರೋಗ್ಯಾಧಿಕಾರಿಗಳು ತಾಲೂಕು ಆಡಳಿತಕ್ಕೆ ಶಿಫಾರಸ್ಸು ಮಾಡಿದ್ದು ಬಸ್ ಡಿಪೋದಲ್ಲಿ ೧೭ ಜನರಿಗೆ ಕೊರೊನಾ ಸೊಂಕು ತಗುಲಿರುವುದು ದೃಢಪಟ್ಟಿದೆ.ಇದರಿಂದ ಇನ್ನೂ ಹೆಚ್ಚಿನ ಸಂಖ್ಯೆಯ ಸಾರಿಗೆ ನೌಕರರಿಗೆ ಸೊಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಸೀಲ್‌ಡೌನ್ ಮಾಡುವಂತೆ ಪತ್ರ ಬರೆದು ತಿಳಿಸಿದ್ದಾರೆ.
ತಾಲೂಕು ಆರೋಗ್ಯಾಧಿಕಾರಿಗಳ ನಿರ್ದೇಶನದಂತೆ ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಅವರು ನಗರಸಭೆಗೆ ಸೂಚಿಸಿ ಸುರಪುರ ಬಸ್ ಘಟಕವನ್ನು ೩ ದಿನಗಳ ಕಾಲ ಸೀಲ್‌ಡೌನ್ ಮಾಡುವಂತೆ ತಿಳಿಸಿದ್ದರಿಂದ ಹೊರ ಹೋಗಿರುವ ಎಲ್ಲಾ ಬಸ್‌ಗಳನ್ನು ಸಾಯಂಕಾಲದ ವೇಳೆಗೆ ಡಿಪೋಗೆ ತರಿಸಿ ಸೀಲ್‌ಡೌನ್ ಮಾಡಲಾಗುತ್ತಿದೆ ಎಂದು ನಗರಸಭೆ ಪೌರಾಯುಕ್ತ ಜೀವನ್ ಕುಮಾರ ಕಟ್ಟಿಮನಿ ತಿಳಿಸಿದ್ದಾರೆ.