ವಾಡಿ: ಲಾಕ್‌ಡೌನ್ ಫಜೀತಿಗೆ ಸಿಕ್ಕು ಬೋಧನೆಯಿಂದ ವಂಚಿತರಾಗುವ ಮೂಲಕ ಸರಕಾರದ ಯಾವೂದೇ ಸೌಲಭ್ಯಗಳು ದೊರೆಯದೆ ತೀವ್ರ ಸಂಕಷ್ಟದ ದಿನಗಳನ್ನು ಎದುರಿಸುತ್ತಿರುವ ರಾಜ್ಯದ ಖಾಸಗಿ ಶಾಲಾ ಶಿಕ್ಷಕರ ಬೇಡಿಕೆಗಳ ಕುರಿತು ಚರ್ಚೆ ನಡೆಸಲು ಜು.೫ ರಂದು ಸಂಜೆ ೭:೦೦ ಗಂಟೆಗೆ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಫೇಸ್‌ಬುಕ್ ಲೈವ್ ಕಾರ್ಯಕ್ರಮ ಏರ್ಪಡಿಸಿದೆ.
ವಿಶೇಷ ಕೋವಿಡ್ ಹಣಕಾಸು ಪ್ಯಾಕೇಜ್ ಘೋಷಿಸುವುದಲ್ಲದೆ ಉದ್ಯೋಗ ಭದ್ರತೆ ಖಾತ್ರಿಪಡಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನಿಟ್ಟು ರಾಜ್ಯದ ಖಾಸಗಿ ಶಿಕ್ಷಕರೊಂದಿಗೆ ಚಚರ್ಚೆ ನಡೆಸುವ ಮೂಲಕ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ.
ಹೋರಾಟದ ಭಾಗವಾಗಿ ಈ ಆನ್‌ಲೈನ್ ಸಂವಾದ ನಡೆಸಲಾಗುತ್ತಿದೆ. ಈ ವೇಳೆ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ನಾಯಕರು ವಿಷಯ ಮಂಡಿಸಲಿದ್ದಾರೆ. ಖಾಸಗಿ ಶಾಲೆಗಳ ಶಿಕ್ಷಕರು ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಬೇಕು ಎಂದು ಸಮಿತಿಯ ಜಿಲ್ಲಾ ಸಂಚಾಲಕ ವೀರಭದ್ರಪ್ಪ ಆರ್.ಕೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.