ವೈದ್ಯರು, ಪತ್ರಕರ್ತರು ಸಮಾಜ ಸ್ವಾಸ್ಥ್ಯ ಕಾಪಾಡುವ ಕಣ್ಣುಗಳು

0
82

ಶಹಾಬಾದ: ವೈದ್ಯರು ಹಾಗೂ ಪತ್ರಕರ್ತರು ಸಮಾಜದ ಸ್ವಾಸ್ಥ್ಯ ಕಾಪಾಡುವ ಎರಡು ಕಣ್ಣುಗಳಿದ್ದಂತೆ ಮಕ್ಕಳ ತಜ್ಞ ಡಾ.ವಿನೋದ ಕವಲಗಿ ಹೇಳಿದರು.

ಅವರು ನಗರದ ಶಹಾಬಾದ ಪತ್ತಿನ ಸಹಕಾರ ಸಂಘದ ವತಿಯಿಂದ ಪತ್ರಕರ್ತರ ಮತ್ತು ವೈದ್ಯರ ದಿನಾಚರಣೆ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಾದ್ಯಂತ ಕೋವಿಡ್-19 ಮಹಾಮಾರಿ ರೋಗ ತಾಂಡವವಾಡುತ್ತಿದೆ.ನಗರದಲ್ಲಿಯೂ ಹಲವಾರು ಪ್ರಕರಣದ ದಾಖಲಾಗಿವೆ. ಈಗ ಕರೊನಾ ಸಮುದಾಯ ಮಟ್ಟದಲ್ಲಿ ಹಬ್ಬುವ ಸಾಧ್ಯತೆ ಹೆಚ್ಚಿದ್ದು, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ.ಆದ್ದರಿಂದ ಸಣ್ಣ ಜ್ವರ, ನೆಗಡಿ, ಕೆಮ್ಮಿಗೆ ನಿರ್ಲಕ್ಷ ಮಾಡದೆ ಕೂಡಲೇ ವೈದ್ಯರನ್ನು ಸಂಪಕರ್ಿಸಬೇಕು. ಮಾಸ್ಕ, ಸೈನಿಟೈಸರ್ ಬಳಸಿ ನಿಮ್ಮ ಕುಟುಂಬವನ್ನು ಉಳಿಸಿ. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೇ ಅನಾಹುತವಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ರಮೇಶ ಭಟ್ಟ ಮಾತನಾಡಿ, ಪತ್ರಕರ್ತರು, ವೈದ್ಯರು ಇಬ್ಬರು ಸಮಾಜದ ಸ್ವಾಸ್ಥ್ಯ ಕಾಪಾಡುವವರಾಗಿದ್ದಾರೆ. ವೈದ್ಯರು ಜನರ ಸ್ವಾಸ್ಥ್ಯ ಕಾಪಾಡಿದರೇ, ಪತ್ರಕರ್ತರು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವವರಾಗಿದ್ದಾರೆ ಎಂದು ಹೇಳಿದರು.

Contact Your\'s Advertisement; 9902492681

 

ವೇದಿಕೆ ಮೇಲೆ ಡಾ.ವೆಂಕಟೇಶ, ಡಾ.ಅಹ್ಮದ ಪಟೇಲ್, ಡಾ. ದಶರಥ ಜಿಂಗಾಡೆ, ಪತ್ರಕರ್ತರಾದ ಮಲ್ಲಿನಾಥ ಪಾಟೀಲ, ರಘುವೀರ ಸಿಂಗ ಠಾಕೂರ, ವಾಸುದೇವ ಚವ್ಹಾಣ ಉಪಸ್ಥಿತರಿದ್ದರು.
ಲೋಹಿತ ಕಟ್ಟಿ ನಿರೂಪಿಸಿದರು, ಶರಣು ವಸ್ತ್ರದ್ ಸ್ವಾಗತಿಸಿದರು. ಸಂಘದ ಕಾರ್ಯದಶರ್ಿ ನಿಂಗಣ್ಣ ಸಂಗಾವಿಕರ ವಂದಿಸಿದರು. ಸಂಘದ ಅಧ್ಯಕ್ಷನಿಂಗಣ್ಣ ಹುಳಗೋಳ, ಉಪಾಧ್ಯಕ್ಷ ಶಿವಾನಂದ ಪಾಟೀಲ, ಶ್ರೀಧರ ಜೋಶಿ, ಸದಾನಂದ ಕುಂಬಾರ, ಮುಖಂಡರಾದ ನಾಗರಾಜ ಮೇಲಗಿರಿ, ಸಂಜಯ ಸೂಡಿ,ಭೀಮಯ್ಯ ಗುತ್ತೆದಾರ, ಚಂದ್ರಕಾಂತ ಮೆಂಗಜಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here