ಕಲಬುರಗಿ: ಕೊರೊನಾ ವೈರಸ್ ಮಹಾಮಾರಿಗೆ ದೇಶದ ಮೊದಲ ವ್ಯಕ್ತಿ ಬಲಿಯಾದ ಕಲಬುರಗಿ ಜಿಲ್ಲೆಯಲ್ಲಿ ಪೊಲೀಸ್, ವೈದ್ಯರು, ಸೇರಿ ಕೊರೊನಾ ವಾರಿಯರ್ಸ್‌ಗೆ ಸೋಂಕು ಹರಡಿದು, ಈಗ ಬ್ಯಾಂಕ್ ಸಿಬ್ಬಂದಿ ಓರ್ವರಿಗೆ ವೈರಸ್ ಪಾಸಿಟಿವ್ ಬರುವ ಮೂಲಕ ಬ್ಯಾಂಕ್ ಗಳಲ್ಲಿ ಕಾಲಿಟ್ಟಂತೆ ಆಯ್ತು.
ನಗರದ ಸಂಗಮೇಶ್ವರ ಕಾಲೋನಿ ಎಸ್ಬಿಐ ಶಾಖೆಯ ಸಿಬ್ಬಂದಿಗೆ ಸೋಂಕು ತಗುಲಿದ್ದು, ಸೊಂಕು ಕಾಣಿಸಿರುವ ಕಾರಣ ಶಾಖೆಯನ್ನು ಬಂದ್ ಮಾಡಲಾಗಿದೆ ಎಂದು ಶಾಖೆಯ ಗೇಟ್ ಮೇಲೆ ಗ್ರಾಹರಿಗೆ ನೋಟಿಸ್ ಹಾಕುವ ಮೂಲಕ ಗ್ರಾಹಕರಿಗೆ ಸೂಚನೆ ನೀಡಿ, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಸಹ ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್ ಆಗುದೆ ಆದರಿಂದ ಬೇರೆ ಶಾಖೆಗಳಲ್ಲಿ ವ್ಯವಹರಿಸುವಂತೆ ವ್ಯವಸ್ಥಾಪಕರು ನೋಟಿಸ್ ಹಚ್ಚಿ ಮನವಿ ಮಾಡಿಕೊಂಡಿದ್ದಾರೆ.
ಮುಂದಿನ ಆದೇಶದವರೆಗೂ ಶಾಖೆ ರೀ ಒಪನ್ ಮಾಡಲಾಗದು. ಅಲ್ಲಿಯವರೆಗೂ ಇಲ್ಲಿನ ಗ್ರಾಹಕರು ಬೇರೆ ಶಾಖೆಯಲ್ಲಿ ವ್ಯವಹಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಪೀಡಿತರ ಸಂಖ್ಯೆ 1600 ಗಡಿ ದಾಟಿದೆ.