ಶಹಾಪುರ : ಜನರ ದಿನಬಳಕೆ ಅಗತ್ಯವಸ್ತುಗಳನ್ನು ದಿನೇದಿನೆ ಏರಿಕೆ ಮಾಡುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ ಬಡವರ ಬದುಕು ಕಿತ್ತು ತಿನ್ನುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್ ಸಾಹು ಆರಬೋಳ ಹೇಳಿದರು.
ಶಹಾಪುರ ತಹಸೀಲ್ದಾರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು ಕಾಂಗ್ರೆಸ್ ಸರ್ಕಾರದಲ್ಲಿದ್ದ ದಿನಬಳಕೆ ವಸ್ತುಗಳ ಬೆಲೆ ಇಂದು ದುಪ್ಪಟ್ಟಾಗಿದೆ ಇದಕ್ಕೆಲ್ಲ ನೇರ ಹೊಣೆ ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರೇ ಎಂದು ಅವರ ವಿರುದ್ದ ಹರಿಹಾಯ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸುರೇಂದ್ರ ಪಾಟೀಲ ಮಡ್ನಾಳ,ಗುಂಡಪ್ಪ ತುಂಬಿಗಿ,ಶಿವಮಾಂತ ಚಂದಾಪುರ,ನಿಂಗಣ್ಣ ನಾಯ್ಕೋಡಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಹಾಜರಿದ್ದರು.