ಆಳಂದ: ಕೊರೋನಾ ಮಹಾಮಾರಿಯಿಂದ ರಕ್ಷಿಸಿಕೊಳ್ಳುವಲ್ಲಿ ಭಾರತ ಬೇರೆ ದೇಶಗಳಿಗಿಂತ ಅತ್ಯಂತ ಸುರಕ್ಷಿತವಾಗಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.
ಸೋಮವಾರ ಆಳಂದ ತಾಲೂಕಿನ ಭೂಸನೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ 18 ಲಕ್ಷ.ರೂ ವೆಚ್ಚದ ಕುಡಿಯುವ ನೀರಿನ ಟ್ಯಾಂಕರ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ತಾವು ಶಾಸಕರಾಗಿ ಆಯ್ಕೆಯಾದ ಈ ಅವಧಿಯಲ್ಲಿ ಅತೀ ಹೆಚ್ಚು ಕಾಮಗಾರಿಗಳನ್ನು ಭೂಸನೂರ ಗ್ರಾಮಕ್ಕೆ ಮಂಜೂರಿ ಮಾಡಿಸಿದ್ದೇನೆ ಜನ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇನ್ನೂ ಉಳಿದಿರುವ ಅವಧಿಯಲ್ಲಿಯೂ ಹೆಚ್ಚಿನ ಕಾಮಗಾರಿಗಳನ್ನು ಮಂಜೂರಿ ಮಾಡಿಸಲು ಪ್ರಯತ್ನಿಸುತ್ತೇನೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಆಳಂದ ಕ್ಷೇತ್ರಕ್ಕೆ ಬೇಕಾಗಿರುವ ಎಲ್ಲ ಕೆಲಸಗಳಿಗೆ ಮಂಜೂರಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಪಕ್ಷ ನೀಡುವ ಯಾವುದೇ ಗುರುತರ ಜವಾಬ್ದಾರಿಯನ್ನು ಹೊರಲು ನಾನು ಸಿದ್ಧನಿದ್ದೇನೆ ರಾಜ್ಯ ಸರ್ಕಾರ ಸುಭದ್ರವಾಗಿದ್ದು ಯಾವುದೇ ಅಡ್ಡಿ ಆತಂಕಗಳಿಲ್ಲದೇ ಯಡಿಯೂರಪ್ಪನವರ ನೇತೃತ್ವದಲ್ಲಿ ಅವಧಿಯನ್ನು ಪೊರೈಸಲಿದೆ ಎಂದು ಹೇಳಿದರು.
ಸಧ್ಯ ಜಗತ್ತಿನಲ್ಲಿ ವಿಷಮ ಪರಿಸ್ಥಿತಿ ನಿರ್ಮಾಣವಾಗಿದೆ ಅದನ್ನು ದಾಟಿ ಹೋಗುವ ನಿಟ್ಟಿನಲ್ಲಿ ಆರೋಗ್ಯದ ಕುರಿತು ಕಾಳಜಿ ವಹಿಸುವುದು ಅಗತ್ಯವಾಗಿದೆ ಜನರು ಸರ್ಕಾರದ ಜೊತೆ ಗಟ್ಟಿಯಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಭೂಸನೂರ ಶ್ರೀಗಳು, ಮುಖಂಡರಾದ ಅನಂತರಾಜ ಸಾಹು, ಶರಣಪ್ಪ ಮಲಶೆಟ್ಟಿ, ಅಶೋಕ ಗುತ್ತೇದಾರ, ರಾಜಶೇಖರ ಮಲಶೆಟ್ಟಿ, ಸಿದ್ದಣ್ಣ ಹರವಾಳ, ಕಲ್ಯಾಣಿ ಧನ್ನಾಗೊಳ, ಶಂಕರ ಸೋಮಾ, ಶೇಖರ ಸಾಹು, ಅಮೃತರಾವ ದೇಶೆಟ್ಟಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.