ಕಲಬುರಗಿ: ಕಳೆದ 7 ವರ್ಷಗಳಿಂದ ಪ್ರತಿ ವರ್ಷ ಜುಲೈ 18ರಂದು ಕೊಡಮಾಡುತ್ತಿದ್ದ ಜಂಗಮಶೆಟ್ಟಿ ರಂಗ ಪ್ರಶಸ್ತಿಯನ್ನ ಕೋವಿಡ್ 19 ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕೊಡದಿರಲು ಆಯ್ಕೆ ಸಮಿತಿಯು ನಿರ್ಧರಿಸಲಾಗಿದೆ.
ರಾಜ್ಯಮಟ್ಟದಲ್ಲಿ ಕೊಡಲಾಗುತ್ತಿದ್ದ ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ರಾಜ್ಯದ ಎಲ್ಲೆಡೆಯಿಂದ ರಂಗಾಸಕ್ತರು ಆಗಮಿಸುವ ಕಾರಣಕ್ಕೆ ಕರೋನ ಸೋಂಕಿನಿಂದ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಈ ವರ್ಷದ ಪ್ರಶಸ್ತಿ ಪ್ರದಾನ ಮಾಡದಿರಲು ಸಮಿತಿ ನಿರ್ಧರಿಸಲಾಗಿದೆ ಎಂದು ರಂಗ ಸಂಗಮ ಕಲಾವೇದಿಕೆ ಕಾರ್ಯದರ್ಶಿ ಡಾ.ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ.
ಕರೋನ ಸೋಂಕು ಕಡಿಮೆಯಾಗಿ ಜನಜೀವನ ಸಾಮಾನ್ಯ ಸ್ಥಿತಿಗೆ ಬಂದ ಮೇಲೆ* ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.