ಕಲಬುರಗಿ: ಕೋವಿಡ್-19 ನೆಪದಲ್ಲಿ ಕಲ್ಯಾಣ ಕರ್ನಾಟಕ ಭಾಗದ ೨೦೨೦ ಮತ್ತು ೨೧ ರ ಆರ್ಥಿಕ ವರ್ಷದ ವೃಂದದ ಹುದ್ದೆಗಳು, ಬ್ಯಾಕಲಾಗ್ ಮತ್ತು ನೇರ ನೇಮಕಾತಿ ಹುದ್ದೆಗಳ ಭರ್ತಿಯನ್ನು ತಡೆ ಹಿಡಿದಿರುವ ಕ್ರಮ ಖಂಡಿಸಿ ಕರ್ನಾಟಕ ನವ ನಿರ್ಮಾಣ ಸೇನೆ ತೀವ್ರವಾಗಿ ಖಂಡಿಸಿ ನಗರದ ಸರ್ದಾರ್ ವಲ್ಲಬಾಯಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಅಭಿವೃದ್ಧಿಯ ವಿಚಾರ ಕೊನೆಯ ಸ್ಥಾನ,ನೇಮಕಾತಿ ವಿಚಾರದಲ್ಲೂ ನಮಗೆ ನಿರ್ಲಕ್ಷ್ಯ ೩೭೧ ಜೆ ಇನ್ನೂ ಸಮರ್ಪಕ ಅನುಷ್ಠಾನವಾಗಿಲ್ಲ. ಈ ಭಾಗಕ್ಕೆ ಸಂಪುಟ ವಿಸ್ತರ್ಣೆಯಲ್ಲೂ ಅನ್ಯಾಯ ಮಾಡಲಾಗಿದೆ. ಪ್ರಮುಖ ಖಾತೆ ಮುಂಬಯಿ ಕರ್ನಾಟಕ, ಮೈಸೂರು ಕರ್ನಾಟಕದ ಪಾಲಾಗಿವೆ.ರಾಜಕಾರಣ ಸೇರಿದಂತೆ ಎಲ್ಲಾ ರಂಗದಲ್ಲೂ ಈ ಭಾಗಕ್ಕೆ ಆಗುತ್ತಿರುವ ಅನ್ಯಾಯಕ್ಕೆ ಕೊನೆ ಎಂದು ಸಂಘಟನೆ ಕಾರ್ಯಕರ್ತರು ಪ್ರಶ್ನಿಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಕೂಡಲೇ ಬ್ಯಾಕ್ ಲಾಗ್, ವೃಂದದ ಹುದ್ದೆ, ನೇರ ನೇಮಕಾತಿಗೆ ನೀಡಿರುವ ಕುಂಟುನೆಪವನ್ನು ವಾಪಸ್ ಪಡೆದು ನೇಮಕಾತಿಗೆ ಆದೇಶ ಹೋರಡಿಸಬೇಕೆಂದು ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾ ಅಧ್ಯಕ್ಷ ರವಿ ಎನ್ ದೇಗಂವ್ ಆಗ್ರಹಿಸಿದರು. ಒಂದು ವೇಳೆ ಆದೇಶ ವಾಪಸ್ ಪಡೆಯದಿದ್ದರೆ ವಿಧಾನಸೌಧ ಮುತ್ತಿಗೆ ಹಾಕಿ ಪ್ರತಿ ಪ್ರತಿಭಟನೆ ನಡೆಸಲಾಗುವುದೆಂದು ಕಾರ್ಯಾಧ್ಯಕ್ಷ ಸಂತೋಷ್ ಪಾಟೀಲ್ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಜುಳಾ ಪಾಟೀಲ್, ಜಿಲ್ಲಾ ಮಹಿಳಾ ಘಟಕ ಉಪಾಧ್ಯಕ್ಷೆ ರಾಜೇಶ್ವರಿ, ದಿಲೀಪ್ ಕಿರಸಾವಳಗಿ, ಶರತ್ ಹಿರೇಮಠ, ಪ್ರಶಾಂತ್ ಕೋರಿ, ಮಾಂತೇಶ್ ಹರವಾಳ ಮತ್ತಿತರಿದ್ದರು.