ಲೋಕೋಪಯೋಗಿ ಇಲಾಖೆಯ ರಸ್ತೆ ಕಾಮಗಾರಿ ಕಳಪೆ

0
83

ಶಹಾಬಾದ:ಸರಕಾರದ ಅಭಿವೃದ್ಧಿ ಕೆಲಸಗಳು, ಸಾರ್ವಜನಿಕರಿಗೆ ಲಾಭವಾಗುವುದಕ್ಕಿಂತ ಅಧಿಕಾರಿ, ಗುತ್ತಿಗೆದಾರರಿಗೆ ಹಾಗೂ ಜನಪ್ರತಿನಿಧಿಗಳಿಗೆ ಲಾಭ ತಂದು ಕೊಡುತ್ತವೆ ಎನ್ನುವುದು ಗುಟ್ಟಾಗಿ ಏನು ಉಳಿದಿಲ್ಲ. ಇದಕ್ಕೆ ಪೂರಕ ಎನ್ನುವಂತೆ ನಗರದ ಕೆಲ ಕಡೆ ನಡೆದಿರುವ ಕಳಪೆ ಸಿಸಿ ರಸ್ತೆ ಕಾಮಗಾರಿಗಳೇ ಸಾಕ್ಷಿ.

ನಗರದ ಮಧ್ಯಭಾಗದಲ್ಲಿರುವ ವಾರ್ಡ ನಂ. 19ರಲ್ಲಿ ಲೋಕೋಪಯೋಗಿ ಇಲಾಖೆಯ ಎಸ್ ಸಿಪಿ  ಯೋಜನೆಯ 53 ಲಕ್ಷ ಅನುದಾನದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.ಆದರೆ ಸಿಸಿ ರಸ್ತೆ ಕಾಮಾಗಾರಿ ಕಳಪೆ ಹಾಗೂ ನಿಯಮ ಅನುಸಾರವಾಗಿ ನಡೆಯುತ್ತಿಲ್ಲ. ಗುತ್ತಿಗೆ ಹಿಡಿದ ಗುತ್ತಿಗೆದಾರ ಕಳಪೆ ಕಾಮಗಾರಿ ಮಾಡಿರುವುದು ಕಂಡು ಬಂದರೂ ಸಂಬಂಧಪಟ್ಟ ಜೆಇ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸ್ಥಳೀಯ ವಾರ್ಡನ ಸಾರ್ವಜನಿಕರು ಆರೋಪಿಸಿದ್ದಾರೆ.

Contact Your\'s Advertisement; 9902492681


ಕ್ರೀಯಾ ಯೋಜನೆಯಲ್ಲಿ 4 ಇಂಚು ನೆಲ ಅಗೆದು, ಮುರುಮ್, ಕಂಕರ್ ಹಾಕಿ ರೋಲರ್ ಮಾಡಬೇಕಿತ್ತು.ಆದರೆ 4 ಇಂಚು ನೆಲ ಅಗೆದಿಲ್ಲ. ಮುರುಮ್ ಹಾಕಿಲ್ಲ. ರೋಲರ್ ಮಾಡಿಲ್ಲ. ನಂತರ ಕಂರ್ ಮುರುಮ್ ಹಾಕಿ ನೀರು ಹಡೆದು, ರೋಲರ್ ಮಾಡಬೇಕಿತ್ತು. ಅದು ಕೂಡ ಮಾಡಿಲ್ಲ. ಕೇವಲ ಇದ್ದ ನೆಲವನ್ನು ಸಮತಲಗೊಳಿಸಿ ನೇರವಾಗಿ ಸಿಸಿ ರಸ್ತೆ ಕಾಮಗಾರಿ ಮಾಡಿದ್ದಾರೆ.

ಅಲ್ಲದೇ ವಾರ್ಡ ಸದಸ್ಯರ ಗಮನಕ್ಕೂ ತರದೇ ಸಿಸಿ ರಸ್ತೆ ಕಾಮಗಾರಿ ಅರ್ಧದಷ್ಟು ಮಾಡಿ ಮುಗಿಸಿದ್ದಾರೆ. ಕ್ರೀಯಾ ಯೋಜನೆ ಪ್ರಕಾರ ಮಾಡದೇ ಇದ್ದರೂ ಅಧಿಕಾರಿಗಳು ಕಂಡು ಕಾಣದಂತೆ ವತರ್ಿಸುತ್ತಿದ್ದಾರೆ.ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ಈ ಕಾಮಗಾರಿಯನ್ನು ತಮ್ಮ ಬಿಜೆಪಿ ಕಾರ್ಯಕರ್ತರಿಗೆ ನೀಡಿದ್ದರಿಂದ ಈ ರೀತಿಯ ಕಳಪೆ ಕಾಮಗಾರಿ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಾರ್ಡ ಸದಸ್ಯ ನಾಗರಾಜ ಕರಣಿಕ್ ಗಂಭೀರವಾಗಿ ಆರೋಪಿಸಿದ್ದಾರೆ.
ಅಲ್ಲದೇ ಕೆಲವೇ ದಿನಗಳಲ್ಲಿ ಈ ರಸ್ತೆ ಬಿರುಕು ಬಿಟ್ಟು, ಹಳ್ಳ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೂಡಲೇ ಮೇಲಾಧಿಕಾರಿಗಳು ಒಮ್ಮೆ ಬೇಟಿ ಪರಿಶೀಲಿಸಿ ಕಳಪೆ ಕಾಮಗಾರಿಯ ವಿರುದ್ಧ ಕ್ರಮ ಕೈಗೊಳ್ಳಲು ನಾಗರಾಜ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here