ಆಳಂದ: ತಾಲೂಕು ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವುದೇ ತಮ್ಮ ಕಲ್ಪನೆಯಾಗಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.
ಶುಕ್ರವಾರ ತಾಲೂಕಿನ ಧುತ್ತರಗಾಂವ ಗ್ರಾಮದ ಬಾಯಿನಾಲಾದಲ್ಲಿರುವ ಸಿದ್ದಮಾಂಬೆ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಯಾತ್ರಿಕ ಭವನದ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು.
ಸಿದ್ದಮಾಂಬೆ ದೇವಸ್ಥಾನವು ಅಪಾರ ಭಕ್ತರ ಭಕ್ತಿಯ ತಾಣವಾಗಿದೆ ಇಲ್ಲಿ ಹಂತ ಹಂತವಾಗಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. ಇಲ್ಲಿಗೆ ಬರುವ ಯಾತ್ರಿಕರ ಅನುಕೂಲಕ್ಕಾಗಿ ೨೫ ಲಕ್ಷ. ರೂ. ವೆಚ್ಚದಲ್ಲಿ ಯಾತ್ರಿಕ ಭವನ ನಿರ್ಮಿಸಲಾಗುತ್ತಿದೆ ಭಕ್ತಾದಿಗಳು ಶುಚಿತ್ವವನ್ನು ಕಾಪಾಡಿಕೊಳ್ಳುವುದರ ಮೂಲಕ ಈ ಪ್ರದೇಶದ ಅಂದವನ್ನು ಮೆರಗುಗೊಳಿಸಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಆಶ್ರಮದ ಸಿದ್ದಮ್ಮಾಂಬೆ ತಾಯಿ ಮುಖಂಡರಾದ ವೀರಣ್ಣ ಮಂಗಾಣೆ, ಚಂದ್ರಕಾಂತ ಮಂಗಾಣೆ, ರಾಜಶೇಖರ ಮಲಶೆಟ್ಟಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.