ಶಹಾಪುರ: ಪ್ರತಿಯೊಬ್ಬರು ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳುವಂತೆ ಕೈಮುಗಿದು ಪ್ರಯಾಣಿಕರಲ್ಲಿ ವಿನಮ್ರವಾಗಿ ಕೇಳಿಕೊಳ್ಳುತ್ತಿರುವದು ಶಹಾಪುರ ಕೆಂಭಾವಿ ಬಸ್ಸಿನಲ್ಲಿ ಕಂಡು ಬಂದಿತು.
ಯಾದಗಿರಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ಪ್ರಯಾಣಿಕರ ಬಗ್ಗೆ ಕಾಳಜಿ ತೋರಿದರು,ಏಕೆಂದರೆ ನಮ್ಮೆಲ್ಲರ ಆಸ್ತಿ ಸಾರ್ವಜನಿಕರು ಅವರು ಸುರಕ್ಷಿತ ಇದ್ದಾಗ ಮಾತ್ರ ಸರ್ಕಾರ ಮತ್ತು ನಾವು ಬದುಕುವುದಕ್ಕೆ ಸಾಧ್ಯ ಎಂದು ಹೇಳಿದರು.
ಶಹಾಪುರ ಬಸ್ ಘಟಕದ ನಿರ್ವಾಹಕರಾದ ಪ್ರಭಯ್ಯ ಸ್ವಾಮಿಯವರು ಬಸ್ ಹತ್ತುತ್ತಿರುವ ಪ್ರತಿಯೊಬ್ಬ ಪ್ರಯಾಣಿಕರಲ್ಲಿ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತಾ ನಮ್ಮ ಜೀವ ನಮ್ಮ ಕೈಯಲ್ಲಿದೆ ಎಂದು ಕೋರೊನಾ ಬಗ್ಗೆ ಜಾಗೃತಿ ಮೂಡಿಸಿದರು.