ಜುಲೈ 24 ವರೆಗೆ ಸಂಪೂರ್ಣ ಬಂದ್- ಸುರೇಶ ವರ್ಮಾ

0
149

ಶಹಾಬಾದ:ತಾಲೂಕಿನಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳು ಹಾಗೂ ಸಾರ್ವಜನಿಕರ ಸಂಚಾರ ಜುಲೈ 24ರ ವರೆಗೆ ಸಂಪೂರ್ಣ ನಿಷೇದಿಸಲಾಗಿದೆ ಎಂದು ತಹಸೀಲ್ದಾರ ಸುರೇಶ ವರ್ಮಾ ತಿಳಿಸಿದ್ದಾರೆ.

ಈಗಾಗಲೇ ನಗರದಲ್ಲಿ ಮಹಾರಾಷ್ಟ್ರದಿಂದ ಬಂದ ಜನರಲ್ಲಿ ಪಾಸಿಟಿವ್ ಕಂಡು ಬರುತ್ತಿತ್ತು.ಈಗ ಈ ಕೊರೊನಾ ಹೆಮ್ಮಾರಿ ನಗರದ ವಾಸಿಗಳಲ್ಲೂ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.ಅಲ್ಲದೇ ಸರ್ಕಾರ ಕಚೇರಿಯ ಹಾಗೂ ಆರೋಗ್ಯ ಸಿಬ್ಬಂದಿಗಳಿಗೂ ವಕ್ಕರಿಸಿದೆ.ಆದ್ದರಿಂದ ಇದನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರ ಅಗತ್ಯ.ಆದ್ದರಿಂದ ಜುಲೈ 24 ವರೆಗೆ ಮೆಡಿಕಲ್ ಶಾಪ್, ಹಾಲು ಹೊರತುಪಡಿಸಿ ಎಲ್ಲಾ ಅಂಗಡಿಗಳು ಬಂದ್ ಇರಲಿವೆ. ಕಿರಾಣಾ ಅಂಗಡಿಗಳು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ತೆರಯಲಿವೆ.ಆದರೆ ಕಿರಾಣಾ ಬಿಟ್ಟು ಗುಟಕಾ, ತಂಬಾಕು,ಸಿಗರೇಟಗಳನ್ನು ಮಾರಿದರೇ ದಂಡ ವಿಧಿಸಲಾಗುವುದು.

Contact Your\'s Advertisement; 9902492681

ಪೆಟ್ರೋಲ್ ಬಂಕ್ ಬೆಳಿಗ್ಗೆ 8 ಗಂಟೆಯಿಂದ 2 ಗಂಟೆಯವರೆಗ ಮಾತ್ರ ಕಾರ್ಯನಿರ್ವಹಿಸುತ್ತವೆ.ತರಕಾರಿ ಅಂಗಡಿಗಳನ್ನು ತೆರೆಯದೇ, ತಳ್ಳೊ ಗಾಡಿಯ ಮೂಲಕ ವಿತರಣೆಗೆ ಅವಕಾಶ ಮಾಡಿಕೊಡಲಾಗಿದೆ. ಒಂದು ವೇಳೆ ಅಂಗಡಿಗಳನ್ನು ತೆರೆದರೇ ಅಂಗಡಿ ಮಾಲೀಕರಿಗೆ 5,000 ಸಾವಿರ ದಂಡ ಹಾಕಲಾಗುವುದು.ಅಲ್ಲದೇ ಲೈಸೆನ್ಸ್ ರದ್ದು ಮಾಡಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ. ಕರೊನಾ ನಿಯಂತ್ರಣದಲ್ಲಿ ಸಾರ್ವಜನಿಕರ ಸಹಭಾಗಿತ್ವ ಮುಖ್ಯ. ಆದ್ದರಿಂದ ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ಹೊರಗಡೆ ಬರಬೇಡಿ ಎಂದು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here