ಕಲಬುರಗಿ: 2020 ನೇ ಸಾಲಿನ ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಪರೀಕ್ಷೆ NEETಯಲ್ಲಿ ಡಾ. ರಶ್ಮಿ ಡಾ. ಶ್ರೀಶೈಲ ನಾಗರಾಳ ರಾಜ್ಯಕ್ಕೆ 1000 ಶ್ರೇಯಾಂಕ ಪಡೆದಿದ್ದು, ಸರ್ಕಾರಿ ಕೋಟಾದಡಿ ಸರ್ಕಾರಿ ಹಾಸನ್ ವೈದ್ಯಕೀಯ ಮಹಾವಿದ್ಯಾಲಯ ಜನರಲ್ ಸರ್ಜರಿ M.S ನಲ್ಲಿ ಉಚಿತ ಪ್ರವೇಶ ಪಡೆದಿದ್ದಾರೆ.
ಡಾ. ರಶ್ಮಿ ಅವರ ತಂದೆ ಡಾ. ಶ್ರೀಶೈಲ ನಾಗರಾಳ ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ಚಿನ್ನಮ್ಮ ಬಸಪ್ಪ ಪಾಟೀಲ ಪದವಿ ಮಹಾವಿದ್ಯಾಲಯ ಚಿಂಚೋಳಿ ಯು ಪ್ರಾಚಾರ್ಯರಾಗಿದ್ದು, ತಾಯಿ ಗಿರಿಜಾ ನಾಗರಾಳ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿಯಾಗಿದ್ದಾರೆ.
ಡಾ. ರಶ್ಮಿ ಕಲಬುರಗಿ ಯ ESIC ಕಾಲೇಜಿನ ಲ್ಲಿ MBBS ಪದವಿ ಉನ್ನತ ಶ್ರೇಯಾಂಕ ದೊಂದಿಗೆ ಮುಗಿಸಿದ್ದು, ಅವರ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಡೀನ್ , ಪ್ರಾಧ್ಯಾಪಕರು, ಸಿಬ್ಬಂದಿ, ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಬಳಗದವರು ಹರ್ಷ ವ್ಯಕ್ತಪಡಿಸಿದ್ದಾರೆ.