ಶಹಾಬಾದ:ನಗರ ಸಭೆ ಸಿಬ್ಬಂದಿಗೆ ಕರೊನಾ ಸೊಂಕು ಕಂಡು ಬಂದ ಹಿನ್ನೇಲೆಯಲ್ಲಿ ನಗರ ಸಭೆ ಕಚೇರಿಯನ್ನು ಸಂಪೂರ್ಣ ಸೀಲಡೌನ್ ಮಾಡಲಾಗಿದೆ.
ನಗರಸಭೆಯ ನೈರ್ಮಲ್ಯ ನಿರೀಕ್ಷಕರೊಬ್ಬರಿಗೆ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದು, ಈಗ ಅವರಿಗೆ ಕರೊನಾ ಸೊಂಕು ಕಂಡು ಬಂದ ಹಿನ್ನೇಲೆಯಲ್ಲಿ ಸಂಪೂರ್ಣ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ. ನೈರ್ಮಲ್ಯ ನಿರೀಕ್ಷರೊಂದಿಗೆ ಸಂಪರ್ಕದಲ್ಲಿದ್ದ ನಾಲ್ಕು ಜನ ಸಿಬ್ಬಂದಿಗೂ ಸಹ ತಪಾಸಣೆಗೆ ಕಳುಹಿಸಲಾಗಿದೆ.
ಕೆಲವು ದಿನಗಳ ಹಿಂದೆ, ಜಿಲ್ಲಾ ಮೀಸಲು ಪೊಲೀಸ್ ಪಡೆಯ ಇಬ್ಬರಿಗೆ ಸೊಂಕು ಕಂಡು ಬಂದಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸವೊಬ್ಬರಿಗೆ ಸೊಂಕು ಕಂಡು ಬಂದ ಹಿನ್ನೇಲೆಯಲ್ಲಿ ಸರ್ಕಾರಿ ಸಮುದಾಯ ಆಸ್ಪತ್ರೆಯನ್ನು ಸೀಲ್ಡೌನ ಮಾಡಲಾಗಿತ್ತು. ಈಗ ನಗರ ಸಭೆ ಕಚೇರಿ ಸರದಿಯಾಗಿದೆ.
ನಗರಸಭೆ ವತಿಯಿಂದ ಸರ್ಕಾರಿ ಆಸ್ಪತ್ರೆ, ನಗರ ಸಭೆ ಕಚೇರಿ, ಪೊಲೀಸ್ ಠಾಣೆ, ತಹಶೀಲ ಕಚೇರಿಯನ್ನು ಸೈನಿಟೈಸರ್ ಮಾಡಲಾಗಿದೆ.