ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳ ನೇಮಕಕ್ಕೆ ಶಾಸಕ ರಾಜುಗೌಡ ಮನವಿ

0
61

ಸುರಪುರ: ಕಳೆದ ೦೬ನೇ ತಾರೀಖಿನಂದು ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಆದೇಶ ಮಾಡಿದ ಮುಖ್ಯಂಮತ್ರಿಗಳ ಕ್ರಮವನ್ನು ವಿರೋಧಿಸಿರುವ ಶಾಸಕ ನರಸಿಂಹ ನಾಯಕ ಅವರು ಹುದ್ದೆಗಳ ನೇಮಕಾತಿಗೆ ಆದೇಶ ನೀಡುವಂತೆ ವಿನಂತಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು,ಕಲ್ಯಾಣ ಕರ್ನಾಟಕ ಭಾಗದ ಅಭೀವೃಧ್ಧಿಗಾಗಿಯೆ ಕಲಂ ೩೭೧ (ಜೆ) ಜಾರಿಗೆ ತರಲಾಗಿದೆ.ಆದರೆ ತಾವು ಇಂದು ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳ ನೇಮಕಾತಿಗೆ ತಡೆಹಿಡಿಯುವಂತೆ ಆದೇಶ ಮಾಡಿರುವಿರಿ ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಯುವಕರಲ್ಲಿ ಬೇಸರ ಮೂಡಿಸಿದೆ.ಈಗಾಗಲೆ ೨೦೧೫ ರಲ್ಲಿ ೧೨೦೩ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗಳು, ೨೦೧೬ ರಲ್ಲಿ ೬೬೧ ಬೆರಳಚ್ಚುಗಾರರ ಹುದ್ದೆಗಳು,೨೦೧೭ ರಲ್ಲಿ ಹಾಸ್ಟೆಲ್ ವಾರ್ಡನ್,ಕಚೇರಿ ಅಧೀಕ್ಷಕರು,ಬಿಲ್ ಕಲೆಕ್ಟರ್,ಸಮಾಜ ಕಲ್ಯಾಣ ವಸತಿ ಶಾಲೆ ಶಿಕ್ಷಕರು ಹೀಗೆ ಹಲವಾರು ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಯ ಅನುಮೋದನೆಯನ್ನು ಪಡೆದು ಅಧಿಸೂಚನೆಯನ್ನು ಹೊರಡಿಸಲಾಗಿತ್ತು.

Contact Your\'s Advertisement; 9902492681

ಈಗಾಗಲೆ ಈ ಎಲ್ಲಾ ಹುದ್ದೆಗಳು ನೇಮಕಾತಿ ಆದೇಶ ನೀಡುವ ಹಂತದಲ್ಲಿವೆ ಇಂತಹ ಸಂದರ್ಭದಲ್ಲಿ ತಾವು ತಡೆ ನೀಡಿರುವುದು ಸರಿಯಲ್ಲ.ಇದರಿಂದ ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗ ಉದ್ಯೋಗದ ನಿರೀಕ್ಷೆಯಲ್ಲಿದ್ದ ಯುವಕ ಯುವತಿಯರಿಗೆ ಬೇಸರ ಮೂಡಿಸಿದೆ.ಆಕಾಂಕ್ಷಿಗಳ ನಿರೀಕ್ಷೆಗೆ ತಕ್ಕಂತೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ನಮ್ಮ ಜವಬ್ದಾರಿಯಾಗಿದೆ.ಆದ್ದರಿಂದ ಕೂಡಲೆ ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳ ನೇಮಕಾತಿಗೆ ನೀಡಿದ ತಡೆಯನ್ನು ತೆರವುಗೊಳಿಸಿ ಹುದ್ದೆಗಳ ನೇಮಕಾತಿ ಆದೇಶ ಹೊರಡಿಸುವಂತೆ ಪತ್ರದಲ್ಲಿ ವಿನಂತಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಉದ್ಯೋಗಾಕಾಂಕ್ಷಿಗಳ ಭರವಸೆಗೆ ಘಾಸಿಯಾಗದಂತೆ ಶಾಸಕ ರಾಜುಗೌಡ ಅವರು ಬೆಂಬಲಿಸಿದ್ದು,ಮುಖ್ಯಮಂತ್ರಿಗಳು ಈ ಪತ್ರಕ್ಕೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕುತೂಹಲದ ಸಂಗತಿಯಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here