ಶಹಾಬಾದ:ತಾಲೂಕಿನಾದ್ಯಂತ ಎರಡು ದಿನಗಳಿಂದ ಮಳೆಯ ಆರ್ಭಟ ಜೋರಾಗಿದ್ದು, ಬುಧವಾರ ಉತ್ತಮ ಮಳೆಯಾಗಿದೆ.
ಮಂಗಳವಾರ ರಾತ್ರಿ ಸುಮಾರು 9 ಗಂಟೆಗೆ ಪ್ರಾರಂಭವಾದ ಮಳೆ ಬುಧವಾರ ಬೆಳಿಗ್ಗೆ 7ವರೆಗೆ ಮಳೆಯಾಯಿತು.ನಂತರ 10 ಗಂಟೆಗೆ ಪ್ರಾರಂಭವಾದ ಮಳೆ ಮತ್ತೆ ಬಿರುಸಾಗಿರುವದುರಿಂದ ಕೃಷಿ ಚಟುವಟುಕೆಗಳಿಗೆ ಹಿನ್ನಡೆಯಾಗಿದೆ.ಅಲ್ಲದೇ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ.ಮಳೆ ಹೀಗೆ ಮುಂದುವರೆದರೆ ಕಾಗಿಣಾ ನದಿಯಲ್ಲಿ ಭಾರಿ ಪ್ರವಾಹ ಉಂಟಾಗುವ ಸಾಧ್ಯೆಯೂ ಇದೆ. ಗ್ರಾಮೀಣ ಪ್ರದೇಶದ ಹಳ್ಳಗಳು ತುಂಬಿ ಹರಿಯುತ್ತಿವೆ. ರಸ್ತೆ ಹಾಗೂ ಖಾಲಿ ಜಾಗಗಳಲ್ಲಿ ನೀರು ತುಂಬಿಕೊಂಡಿವೆ. ನಗರದ ಚರಂಡಿಗಳು ತುಂಬಿಕೊಂಡು ರಸ್ತೆಯ ಮೇಲೆ ನೀರು ಹರಿಯುತ್ತಿವೆ. ಬಹುತೇಖ ಹೊಲಗಳಲ್ಲಿ ಎಲ್ಲೆಂದರಲ್ಲಿ ನೀರು ಆವರಿಸಿಕೊಂಡಿದೆ.
ಲಾಕ್ಡೌನ್ ಇರುವುದರಿಂದ ಜನರು ಮನೆಯಲ್ಲಿದ್ದಾರೆ.ಒಂದು ವೇಳೆ ಲಾಕ್ಡೌನ್ ಇರದಿದ್ದರೇ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ವಾತಾವರಣವನ್ನು ಗಮನಿಸಿದರೇ ಮಳೆ ನಿಲ್ಲುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಒಂದು ವೇಳೆ ಹೀಗೆ ಮುಂದುವರೆದರೇ ಒಂದೆರಡು ಗೇಣಿನಷ್ಟು ಬೆಳೆದ ಉದ್ದು, ಹೆಸರು ಬೆಳೆ ನಾಶವಾಗುವ ಸಾಧ್ಯತೆ ಇದೆ. ಎರಡು ತಿಂಗಳಿನಿಂದ ರೈತರು ಹೊಲವನ್ನು ಹದ ಮಾಡಿ, ಬಿತ್ತನೆ ಮಾಡಿ, ಗೊಬ್ಬರ ಹಾಕಿ ಸಾಕಷ್ಟು ಹಣ ವ್ಯಯ ಮಾಡಿದ್ದಾನೆ. ಒಂದು ವೇಳೆ ಬೆಳೆ ಹಾಳಾದರೆ ಸಾಲ ಮಾಡಿದ ರೈತನಿಗೆ ಮತ್ತೆ ಬರೆ ಹಾಕಿದಂತಾಗುವುದು ಮಾತ್ರ ನಿಜ.