ಅನಧಿಕೃತ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ವಾಹನಗಳಿಗೆ 47 ಸಾವಿರ ದಂಡ

0
51

ಕಲಬುರಗಿ: ಎಫ್.ಎಸ್.ಎಸ್.ಎ.ಐ.ನ ಅಂಕಿತ ಅಧಿಕಾರಿ ಡಾ. ದೀಪಕ ಕುಮಾರ ಸುಕೆ ಇವರ ನೇತೃತ್ವದಲ್ಲಿ ಅಹಾರ ಸುರಕ್ಷತಾ ಅಧಿಕಾರಿಗಳ ತಂಡವು ಮಂಗಳವಾರ ಪರವಾನಿಗೆ ಮತ್ತು ನೊಂದಣಿ ಇಲ್ಲದೆ ಅನಧಿಕೃತವಾಗಿ ನೀರು ಸರಬರಾಜು ಮಾಡುತ್ತಿರುವ ವಾಹನಗಳಿಗೆ ಅಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಮತ್ತು 2011ರ ಅಡಿಯಲ್ಲಿ ಒಟ್ಟು 47,000 ರೂ.ಗಳ ದಂಡವನ್ನು ಹಾಕಲಾಯಿತು.

ಕಲಬುರಗಿ ಜಿಲ್ಲೆಯಲ್ಲಿ ಅನಧಿಕೃತವಾಗಿ ನೀರನ್ನು ಸರಬರಾಜು ಮಾಡುತ್ತಿದ್ದು, ಸಾರ್ವಜನಿಕರು ಈ ನೀರನ್ನು ಬಳಸದೇ ISI BIS ಮತ್ತು FSSAI ಚಿಹ್ನೆ ಮತ್ತು FSSAI ಪರವಾನಿಗೆ ಸಂಖ್ಯೆ ಹೊಂದಿದ ಹಾಗೂ Date of Manufacture, Best Before ಮತ್ತು ಸೀಲ್ಡ್ ಮಾಡಿದ ನೀರಿನ ಕ್ಯಾನಗಳು ಮಾತ್ರ ಖರೀದಿಸಬೇಕು.

Contact Your\'s Advertisement; 9902492681

ಅದೆ ರೀತಿ ISI ಪರವಾನಿಗೆ ಪಡೆದ ಘಟಕಗಳು ಒಂದು ವಾರದೊಳಗಾಗಿ ಎಲ್ಲಾ ಹಳೆಯ ಕ್ಯಾನ್‍ಗಳನ್ನು ಬದಲಿಸಿ ಹೊಸ ಕ್ಯಾನ್‍ಗಳು ಉಪಯೋಗಿಸಿ ISI BIS ನಿಂದ ಪಡೆದ FSSAI ಪರವಾನಿಗೆ ಸಂಖ್ಯೆ ಮತ್ತು ಪರವಾನಿಗೆ ಸಂಖ್ಯೆ ಹಾಗೂ ಚಿಹ್ನೆ ಹೊಂದಿದ ಹಾಗೂ Date of Manufacture, Best Before ಮತ್ತು ಸೀಲ್ಡ್ ಮಾಡಿದ ಕ್ಯಾನ್Àಗಳನ್ನು ಮಾತ್ರ ಸರಬರಾಜು ಮಾಡಬೇಕು. ನೀರು ಸರಬರಾಜು ಮಾಡುವ ವಾಹನಗಳು FSSAI ಪರವಾನಿಗೆ/ನೊಂದಣಿ ಮಾಡಿಸಿಕೊಳ್ಳಬೇಕು. ಇದಕ್ಕೆ ತಪ್ಪಿದಲ್ಲಿ ಅಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ-2006 ಮತ್ತು 2011 ರ ನಿಯಮದಡಿ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here