ಸುರಪುರ: ಕಳೆದ ನಾಲ್ಕು ದಿನಗಳಿಂದ ರಾಜ್ಯದಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದ್ದು,ಎಲ್ಲಾ ಅಗತ್ಯ ವಸ್ತುಗಳಾದ ದಿನಸಿ ಹಾಲು ಹಣ್ಣು ತರಕಾರಿ ಮತ್ತು ಪೆಟ್ರೋಲ್ ಬಂಕ್ ಹಾಗು ಆಸ್ಪತ್ರೆ ಮತ್ತು ಮೆಡಿಕಲ್ ಶಾಪ್‌ಗಳನ್ನು ತೆರೆಯಲು ಮಾತ್ರ ಅವಕಾಶ ನೀಡಲಾಗಿತ್ತು.
ಅದರಲ್ಲಿ ದಿನಸಿ ತರಕಾರಿ ಹಣ್ಣು ಹಾಲು ಮಾರಾಟಕ್ಕೆ ಬೆಳಿಗ್ಗೆ ೫ ಗಂಟೆಯಿಂದ ಮದ್ಹ್ಯಾನ ೧ ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿತ್ತು.ಆದರೆ ಭಾನುವಾರದ ಲಾಕ್‌ಡೌನ್ ಅಂಗವಾಗಿ ಎಲ್ಲಾ ಅಂಗಡಿಗಳು ಬಂದ್ ಮಾಡಲಾಗಿತ್ತು. ಅಲ್ಲದೆ ಮೊದಲ ಬಾರಿಗೆ ಪೆಟ್ರೋಲ್ ಬಂಕ್ ಕೂಡ ಬಂದ್ ಮಾಡಿ ಲಾಕ್‌ಡೌನ್ ಆಚರಿಸಲಾಯಿತು.
ಲಾಕ್‌ಡೌನ್ ಅಂಗವಾಗಿ ನಗರದೆಲ್ಲೆಡೆ ಪೊಲೀಸ್ ಸಿಬ್ಬಂದಿ ಗಸ್ತು ಸುತ್ತುತ್ತಿದ್ದರು ಅಲ್ಲಲ್ಲಿ ಜನರು ಅನಾವಶ್ಯಕವಾಗಿ ಓಡಾಡಲು ಬಂದು ಫಜೀತಿ ಅನುಭವಿಸಿದ ಘಟನೆಗಳು ಕೂಡ ನಡೆದವು.ಮಹಾತ್ಮಾ ಗಾಂಧಿ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳು ಅನಾವಶ್ಯಕವಾಗಿ ಬೈಕ್ ಹತ್ತಿ ಮನೆಯಿಂದ ಹೊರಗೆ ಬಂದವರಿಗೆ ಲಾಠಿ ಬೀಸಿ ಬಿಸಿ ಮುಟ್ಟಿಸಿದರಲ್ಲದೆ, ಪಿಎಸ್‌ಐ ಚೇತನ್ ನೇತೃತ್ವದಲ್ಲಿ ಸುಮಾರು ಮೂವತ್ತಕ್ಕು ಹೆಚ್ಚು ಬೈಕ್ ಸವಾರರಿಗೆ ತಡೆದು ದಂಡ ವಿಧಿಸಿ ಲಾಕ್‌ಡೌನ್ ಬಿಸಿ ಮುಟ್ಟಿಸಿದರು.ಇದೇ ಮೊದಲ ಬಾರಿ ಲಾಕ್‌ಡೌನ್ ಸಂಪೂರ್ಣ ಯಶಸ್ವಿಯಾಗಿದ್ದು ಕಂಡುಬಂತು.