ಶಹಾಬಾದ:ನಗರದ ಕಾಂಗ್ರೆಸ್ ಪಕ್ಷದ ವತಿಯಿಂದ ಮಂಗಳವಾರ ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ರಾಜ್ಯ ಸಭಾ ಸದಸ್ಯ ಡಾ.ಮಲ್ಲಿಕಾರ್ಜುನ್ ಖರ್ಗೆ ಅವರ 78 ನೇ ಜನ್ಮದಿನವನ್ನು ಪೌರಕಾರ್ಮಿಕರಿಗೆ ಹಣ್ಣು ಹಂಪಲು, ಸ್ಯಾನಿಟೈಜರ್ ಹಾಗೂ ಮಾಸ್ಕ್ ನೀಡುವ ಮೂಲಕ ಆಚರಿಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ವಿಜಯಕುಮಾರ ರಾಮಕೃಷ್ಣ ಪೌರಕಾರ್ಮಿಕರಿಗೆ ಹಣ್ಣು ಹಂಪಲು, ಸ್ಯಾನಿಟೈಜರ್ ಹಾಗೂ ಮಾಸ್ಕ್ ವಿತರಿಸಿ ಮಾತನಾಡಿ, ಕಳೆದ ಐದು ದಶಕಗಳಿಂದ ಹೈದ್ರಬಾದ ಕರ್ನಾಟಕಕ್ಕೆ ಡಾ.ಮಲ್ಲಿಕಾರ್ಜುನ್ ಖರ್ಗೆ ಅವರು ಕೊಟ್ಟ ಕೊಡುಗೆ ಅಪಾರ. ಈ ಭಾಗದ ಅಭಿವೃದ್ಧಿಗಾಗಿ ಸದಾ ಹಗಲಿರುಳು ಶ್ರಮಿಸಿದ ನಾಯಕ. ಕಲಬುರಗಿಯಲ್ಲಿ ನಗರದಲ್ಲಿ ಇಎಸ್ಐ ಆಸ್ಪತ್ರೆ, ಪೊಲೀಸ್ ಟ್ರೇನಿಂಗ್ ಸೆಂಟರ್, 370 ಜೆ (ಕಲಂ) ಓಳಗೊಂಡಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಕೀರ್ತಿ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಸಲ್ಲುತ್ತದೆ.ಅವರ ರಾಜಕೀಯ ಜೀವನದಲ್ಲಿ ಹಲವಾರು ನಾಯಕರನ್ನು ಬೆಳೆಸಿದ್ದಾರೆ. ಅವರ ಜನ್ಮದಿನಾಚರಣೆಯನ್ನು ಕೊವಿಡ್ 19 ಸಂದರ್ಭದಲ್ಲಿ ಸರಳವಾಗಿ ಆಚರಿಸುವ ಮೂಲಕ ಪೌರಕಾರ್ಮಿಕರಿಗೆ ಹಣ್ಣು ಹಂಪಲು, ಸ್ಯಾನಿಟೈಜರ್ ಹಾಗೂ ಮಾಸ್ಕ್ ವಿತರಣೆ ಮಾಡಿದ್ದೆವೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿಜಯಕುಮಾರ ಮುತ್ತಟ್ಟಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ತಾಲೂಕಾ ಕಾಂಗ್ರೆಸ್ ಅಧ್ಯಕ್ಷ ರಾಜೇಶ ಯನಗುಂಟಿಕರ್, ಕಾರ್ಯದಶರ್ಿ ಮೃತ್ಯುಂಜಯ್ ಹಿರೇಮಠ, ಶರಣಗೌಡ ಪಾಟೀಲ ಗೋಳಾ, ಗಿರೀಶ ಕಂಬಾನೂರ, ಕಿರಣ ಚವ್ಹಾಣ, ಡಾ.ಅಹ್ಮದ್ ಪಟೇಲ್, ನಾಗೇಂದ್ರ ಕರಣಿಕ್,ಶರಣಬಸಪ್ಪ ಪಗಲಾಪೂರ, ಸುರೇಶ ಮೆಂಗನ್,ತಿಪ್ಪಣ್ಣ ನಾಟೇಕಾರ ಸೇರಿದಂತೆ ಇತರರು ಇದ್ದರು.