ಶಹಾಬಾದ:ನಗರದ ಇಎಸ್ಐ ಆಸ್ಪತ್ರೆಯನ್ನು ರಾಯಚೂರಗೆ ಸ್ಥಳಾಂತರಿಸುವ ಕ್ರಮವನ್ನು ಖಂಡಿಸಿ ಮಂಗಳವಾರ ಸಿಪಿಐ ಪಕ್ಷ ಹಾಗೂ ಜೆಡಿಎಸ್ ಪಕ್ಷದ ವತಿಯಿಂದ ಇಎಸ್ಐ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಅತಿ ಹೆಚ್ಚು ನಗರ ಕಾರ್ಮಿಕರನ್ನು ಹೊಂದಿರುವ ನಗರವೆಂದರೇ ಶಹಾಬಾದ. ಇಂತಹ ನಗರದಲ್ಲಿ ಎರಡು ಕಾರ್ಖಾನೆಗಳು ಬಂದ್ ಆಗಿವೆ.ಅಲ್ಲದೇ ಅನೇಕ ಪಾಲಿಷ್ ಮಶಿನ್,ಸಣ್ಣ ಪುಟ್ಟ ಇಂಡಸ್ಟ್ರಿಗಳು ಕಾರ್ಯನಿರ್ವಹಿಸುತ್ತಿವೆ. ಈಗ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿದೆ ಎಂದು ಇಎಸ್ಐ ಆಸ್ಪತ್ರೆಯನ್ನು ನಗರದಿಂದ ರಾಯಚೂರಿಗೆ ಸ್ಥಳಾಂತರಿಸುತ್ತಿದೆ. ಇದನ್ನು ನಾವು ಖಂಡಿಸುತ್ತೆವೆ.ಯಾವುದೇ ಕಾರಣಕ್ಕೂ ಇಲ್ಲಿನ ಕಾರ್ಮಿಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಜನಪ್ರತಿನಿಧಿಗಳದ್ದು.ಆದರೆ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲವೆಂಬುದೇ ದುರದೃಷ್ಕರ ಸಂಗತಿಯಾಗಿದೆ. ಶಾಸಕ ಇದ್ದು ಇಲ್ಲಂದಂತಾಗಿದೆ.ಮತ್ತೆ ಚುನಾವಣೆ ಸಂದರ್ಭದಲ್ಲಿ ನಾವು ಗೆದ್ದು ಬಂದರೆ ಒಂದು ತಿಂಗಳಲ್ಲಿ ಎರಡು ಕಂಪನಿಗಳನ್ನು ಪ್ರಾರಂಭ ಮಾಡುತ್ತೆನೆ ಎಂದು ಹೇಳಿದ ಸಂಸದ ಡಾ.ಉಮೇಶ ಜಾಧವ ಇಲ್ಲಿನ ಇಎಸ್ಐ ಆಸ್ಪತ್ರೆ ಇಲ್ಲಿಂದ ಹೋಗದಂತೆ ತಡೆದರೇ ಸಾಕಾಗಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಜನಪ್ರತಿನಿಧಿಗಳ ಕರ್ತವ್ಯ ಏನು ಎಂಬುದೇ ಮರೆತಿದ್ದಾರೆ. ಕೇವಲ ಫೋಜು ಕೊಡಲು ಬರುವ ಶಾಸಕರೇ, ಸಂಸದರೇ ಒಮ್ಮೆ ಕಾರ್ಮಿಕರ ಸಂಕಷ್ಟವನ್ನು ಅರಿತು ಈಗಲಾದರೂ ಈ ಬಗ್ಗೆ ಹೋರಾಟ ನಡೆಸಿ ಇಎಸ್ಐ ಆಸ್ಪತ್ರೆಯನ್ನು ಉಳಿಸಿಕೊಳ್ಳಬೇಕೆಂದು ಆಗ್ರಹಿಸಿದರಲ್ಲದೇ, ಯಾವುದೇ ಕಾರಣಕ್ಕೂ ಇಎಸ್ಐ ಆಸ್ಪತ್ರೆಯನ್ನು ಹೋಗದಂತೆ ತಡೆಯುತ್ತೆವೆ ಎಂದು ಎಚ್ಚರಿಕೆ ನೀಡಿದರು.ನಂತರ ಇಎಸ್ಐ ಆಸ್ಪತ್ರೆಯ ಶಾಖಾ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.
ಜೆಡಿಎಸ್ ಅಧ್ಯಕ್ಷ ರಾಜ್ ಮಹ್ಮದ್ ರಾಜಾ, ಲೋಹಿತ್ ಕಟ್ಟಿ, ಮಹ್ಮದ್ ಉಬೆದುಲ್ಲ, ಸಿಪಿಐ ಪಕ್ಷದ ಅಶೋಕ ಮ್ಯಾಗೇರಿ, ವೀರಯ್ಯಸ್ವಾಮಿ, ರಾಯಪ್ಪ ಹುರಮುಂಜಿ, ವಿಜಯಕುಮಾರ ಕಂಠಿಕರ್,ಮಲ್ಲಿಕಾಜರ್ುನ, ಮಾರುತಿ, ರವಿ ಕುಲಕರ್ಣಿ,ಮೆಹಬೂಬ,ಬಸವರಾಜ ಮಯೂರ, ಅಬ್ದುಲ್ ಜಬ್ಬಾರ್,ಬಸವರಾಜ ದಂಡಗುಲಕರ್, ವಿಶ್ವನಾತ ಚಿತ್ತಾಪೂರ, ಚಾಂದ್ ಪಾಶಾ ವಾಹೀದಿ, ರಶೀದ್ ಸಾಬ, ಭೀಮರಾಯ, ಮಲ್ಲಿಕಾಜರ್ುನ ಹೊನಗುಂಟಿ, ಸುಭಾಸ, ಚಂದ್ರಕಾಂತ ಇತರರು ಇದ್ದರು.