ಕಲಬುರಗಿ: 5 ಆಗಸ್ಟ್ ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದು ಭಾರತೀಯ ಧರ್ಮ ಸಂಸ್ಕೃತಿ ಪರಂಪರೆ ಹಾಗೂ ಸ್ವಾಭಿಮಾನದ ಪ್ರತೀಕವಾಗಿದೆ ಪ್ರಭು ಶ್ರೀರಾಮನ ಜನ್ಮಸ್ಥಳದಲ್ಲಿ ಶಿವಲಿಂಗ ಪತ್ತೆಯಾಗಿದ್ದು ಶ್ರೀರಾಮನೂ ಕೂಡ ಶಿವನ ಆರಾಧಕನಾಗಿದ್ದ ಅದೇ ಶ್ರೀರಾಮನ ಮಂದಿರದ ಪ್ರಾಂಗಣದಲ್ಲಿ ಶಿವನ ದೇಗುಲವು ನಿರ್ಮಿಸಿದಲ್ಲಿ ಸರ್ವ ಶಿವ ಭಕ್ತರಿಗೂ ಹಾಗೂ ಶ್ರೀರಾಮನಿಗೂ ಹರ್ಷ ಉಂಟಾಗಬಹುದು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಡಾ. ಶರಣ ಬಿ ಪಾಟೀಲ್ ತಿಳಿಸಿದ್ದಾರೆ.
ಅದಲ್ಲದೆ ಆಯೋಧ್ಯ ಪ್ರತಿಯೊಬ್ಬ ಭಾರತೀಯನಿಗೂ ಸ್ವಾಭಿಮಾನದ ಶ್ರದ್ಧಾ ಕೇಂದ್ರವಾಗುತ್ತದೆ ಈ ನಿಟ್ಟಿನಲ್ಲಿ ರಂಭಾಪುರಿ ಜಗದ್ಗುರುಗಳು ಶ್ರೀಶೈಲ ಪೀಠದ ಜಗದ್ಗುರು ಹಾಗೂ ಕಾಶಿ ಪೀಠದ ಜಗದ್ಗುರುಗಳು ಅದಾಗಲೇ ಆಗ್ರಹಿಸಿದಂತೆ ಸರ್ವ ಸಮುದಾಯದ ಹಾಗೂ ಶಿವ ಭಕ್ತರ ಆಗ್ರಹವಾಗಿದೆ ಈ ನಿಟ್ಟಿನಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಟ್ರಸ್ಟ್ ವತಿಯಿಂದ ಸೂಕ್ತ ವಿಚಾರ ಕೈಗೊಂಡು ಶ್ರೀರಾಮಮಂದಿರದ ಪ್ರಾಂಗಣದಲ್ಲಿ ಶಿವ ಮಂದಿರವು ನಿರ್ಮಿಸುವ ಮೂಲಕ ಎಲ್ಲರ ಧಾರ್ಮಿಕ ಭಾವನೆಗಳಿಗೆ ಒತ್ತು ನೀಡಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.