ಕಲಬುರಗಿ: ನಗರದ ಸೇಡಂ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯಸಭಾ ಸದಸ್ಯರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರ 78 ನೆ ಜನ್ಮದಿನ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಈರುಣ್ಣ ಪಾಟೀಲ್ ಝಳಕಿ ಮಾತನಾಡಿ, 371ಜೆ ರೂವಾರಿ, ಕಲ್ಯಾಣ ಕರ್ನಾಟಕದ ಶಿಕ್ಷದ ಹರಿಕಾರ ಡಾ. ಖರ್ಗೆ ಅವರು ಪಕ್ಷದಲ್ಲಿ ಸಿಕ್ಕಿರುವ ಅವಕಾಶವನ್ನು ಈ ಭಾಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಕೇಂದ್ರದಲ್ಲಿ ಸಚಿವರಾಗಿ ಜಿಲ್ಲೆಯ ಇ.ಎಸ್.ಐ.ಸಿ ಆಸ್ಪತ್ರೆ ನಿರ್ಮಿಸಿ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ, ನಿಗದಿತ ಸಮಯದಲ್ಲಿ ರೈಲ್ವೆ ಕಾಮಗಾರಿಗೆ ಮಂಜುರಿ ಮತ್ತು ನೂತನ ರೈಲ್ವೆ ಕೋಚ್ ನಿರ್ಮಾಣ ಮಂಜುರು ಮಾಡಿ ಈ ಭಾಗದ ಸೇವೆ ಮಾಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಸ್ಟೇಟ್ ಸ್ಪೋಕ್ ಪರ್ಸನ್ ಚೇತನ್ ಗೋನಾಯಕ ಇದ್ದರು. ಶಕೀಲ್ ಸರಡಿ ಮಾತನಾಡಿ, ಖರ್ಗೆ ಅವರು ಪಕ್ಷ ನೀಡುವ ಜವಾಬ್ದಾರಿಗಳನ್ನು ಉತ್ತಮವಾಗಿ ನಿಭಾಯಿಸಿದ್ದಾರೆ ಎಂದರು. ಡಾ. ಖರ್ಗೆ ಅವರು ಅವರ ವ್ಯಕ್ತಿತ್ವ ವಿಭನವಾಗಿದೆ ಎಂದು ಸಾಜಿದ್ ಅಲಿ ರಂಜೋಳ್ವಿ ಬಣಿಸಿದರು.
ಈ ಸಂದರ್ಭದಲ್ಲಿ ಜನ್ಮದಿನದ ನಿಮಿತ್ತ ರಕ್ತದಾನ ಶಿಬಿರ, ಆಹಾರ ಧಾನ್ಯದ ಕೀಟ್, ಮಾಸ್ಕ್, ಸ್ಯಾನಿಟೈಜರ್, ಔಷಧಿಗಳನ್ನು ಹಂಚಲಾಯಿತು. ಅವೇಜ್ ಶೇಖ್ ಸೇರಿದಂತೆ ಮುಂತಾದವರು ಇದ್ದರು.