ಶಹಾಪುರ: ಕರೋನಾ ಭಯದಿಂದ ಮಕ್ಕಳ ಶಾಲಾ ಬೋಧನಾ ನಿಂತು ಹೋಗಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಗ್ರಾಮದ ವಠಾರ ಹಾಗೂ ಓಣಿಯ ಕಟ್ಟೆಯಲ್ಲಿ ಕೋರೊನಾ ಜಾಗತಿ ಮೂಡಿಸಿ ಮಕ್ಕಳ ನಿರಂತರ ಕಲಿಕಾ ಪ್ರಕ್ರಿಯೆಯನ್ನು ಮುಂದುವರಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಾಲ್ಲೂಕು ಸಂಪನ್ಮೂಲ ವ್ಯಕ್ತಿಗಳಾದ ರಾಜಶೇಖರ್ ಪತ್ತಾರ ಹೇಳಿದರು.
ತಾಲೂಕಿನ ಹೊಸೂರು ಗ್ರಾಮದಲ್ಲಿ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿರುವ ಕಟ್ಟೆಯ ಮೇಲೆ ಕೊರೊನಾ ಜಾಗೃತಿ ಹಾಗೂ ಬೋಧನಾ ಕಲಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಗುರುಲಿಂಗಪ್ಪ ಸಾಹು ಅಂಗಡಿ ಮಾತನಾಡಿ ಕೋರೋನಾ ಸಂದರ್ಭದಲ್ಲಿ ಬಹುತೇಕ ಶಾಲಾ ಮಕ್ಕಳು ಕಲಿಕೆಯಿಂದ ವಂಚಿತರಾಗಿದ್ದು ಶೈಕ್ಷಣಿಕವಾಗಿ ಹಿಂದುಳಿದು ಆತ್ಮಸ್ಥೈರ್ಯ ಕಳೆದುಕೊಳ್ಳುವ ಭೀತಿಯಲ್ಲಿರುವ ವಿದ್ಯಾರ್ಥಿಗಳಿಗೆ ಶಿಕ್ಷಕರು ಇಂಥ ಕಾರ್ಯಕ್ಕೆ ಮುಂದಾಗಿರುವುದು ತುಂಬಾ ಸಂತೋಷದ ಸಂಗತಿ ಎಂದು ನುಡಿದರು.ಶಾಲೆಯ ಮುಖ್ಯಗುರುಗಳಾದ ಚಿದಾನಂದ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.