ಕಲಬುರಗಿ: ಜಿಲ್ಲೆಯ ಸುಮಾರು ಐದು ಎಸ್.ಬಿ.ಐ ಬ್ಯಾಂಕ್ ಗಳ 6 ಸಿಬ್ಬಂದಿಗಳಿಗೆ ಕೊರೊನಾ ಪಾಜಿಟಿವ್ ಆಗಿರುವ ಹಿನ್ನೆಲೆಯಲ್ಲಿ ಮುಖ್ಯ ಕಚೇರಿ ಸೇರಿ ಐದು ಬ್ರಾಂಚ್ ಗಳನ್ನು ಸ್ಯಾನಿಟೈಜ್ ಮಾಡಿ ಮುಂದಿನ ಆದೇಶದ ವರೆಗೆ ಸಿಲ್ ಡೌನ್ ಮಾಡಿ ಸೂಚನಾ ಫಲಕ ಹಚ್ಚಿ ಮಾಹಿತಿ ನೀಡಿದ್ದಾರೆ.
ಕಲಬುರಗಿ ನಗರದ ಮುಖ್ಯ ಕಾರ್ಯ ನಿರ್ವಾಹಕ ಶಾಖೆ, ಮಕ್ಕಾ ಕಾಲೋನಿ, ದರ್ಗಾ ಬ್ರಾಂಚ್, ಹಾಗೂ ಜೇವರ್ಗಿಯ ಒಂದು ಬ್ಯಾಂಕ್ ಸಿಲ್ ಡೌನ್ ಮಾಡಿ ತಾತ್ಕಾಲಿಕ ವ್ಯವಹಾರಗಳನ್ನು ಸ್ಥಗಿತ ಗೊಳಿಸಿ, ಪರ್ಯಾಯ ಶಾಖೆಯಲ್ಲಿ ಸೇವೆ ಪಡೆಯಲು ಬ್ಯಾಂಕ್ ವ್ಯವಸ್ಥಾಪಕರು ಸೂಚನೆ ನೀಡಿದ್ದಾರೆ.
ಕಲಬುರಗಿಯಲ್ಲಿ ಇದಕ್ಕೂ ಮುನ್ನ ಜೇವರ್ಗಿ ರಸ್ತೆಯಲ್ಲಿರುವ ಬ್ಯಾಂಕ್ ಸಿಬ್ಬಂದಿ ಓರ್ವರಿಗೆ ಪಾಜಿಟಿವ್ ವರದಿ ಬಂದಿತ್ತು.