ಜಾಲಿಬೆಂಚಿ:ಎರಡು ಕಿಲೋ ಮೀಟರ್ ಒಂದೇ ಕೈಯಿಂದ ಎತ್ತಿನ ಗಾಡಿ ಚಕ್ರ ತಳ್ಳಿದ ಭೂಪ

0
203

ಸುರಪುರ: ತಾಲೂಕಿನ ಜಾಲಿಬೆಂಚಿ ಗ್ರಾಮದ ಯುವಕನೊಬ್ಬ ನಾಗರ ಪಂಚಮಿ ಅಂಗವಾಗಿ ಸಾಹಸಮಯ ಪಂದ್ಯಕಟ್ಟಿ ಗೆದ್ದು ಬೀಗಿದ ಘಟನೆ ನಡೆದಿದೆ.ನಾಗರ ಪಂಚಮಿ ಅಂಗವಾಗಿ ರಾಜ್ಯದ ಗ್ರಾಮೀಣ ಭಾಗದಲ್ಲಿ ಅನೇಕ ರೀತಿಯ ಪಂದ್ಯಗಳನ್ನು ಕಟ್ಟಿ ಶ್ರಮಿಸುವುದು ವಾಡಿಕೆಯಾಗಿದೆ.

ಅದರಂತೆ ತಾಲೂಕಿನ ಜಾಲಿಬೆಂಚಿ ಗ್ರಾಮದ ಜನತೆ ಪಂದ್ಯಾಟವಾಗಿ ಒಂದೇ ಕೈಯಿಂದ ಎತ್ತಿನ ಗಾಡಿ ಚಕ್ರ ತಳ್ಳುವ ಪಂದ್ಯಕಟ್ಟಿದ್ದಾರೆ.ಅದೇ ಗ್ರಾಮದ ಯುವಕ ರಾಜಮಹ್ಮದ ಚನ್ನೂರ ಎಂಬ ಯುವಕ ಪಂದ್ಯವೊಂದನ್ನು ಕಟ್ಟಿ ಎಡ ಭುಜದ ಮೇಲೆ ತುಂಬಿದ ಕೊಡವನ್ನು ಹಿಡಿದು,ಮತ್ತೊಂದು ಕೈಯಿಂದ ಎತ್ತನ ಬಂಡಿಯ ಒಂದು ಚಕ್ರವನ್ನು ತಳ್ಳುವ ಪಂದ್ಯ ಕಟ್ಟಿದ್ದಾನೆ.ಅದರಂತೆ ಎಡ ಭುಜದ ಮೇಲೆ ತುಂಬಿದ ಕೊಡವನ್ನು ಹಿಡಿದು,ಬಲಗೈಯಿಂದ ಬಂಡಿಯ ಗಾಲಿಯನ್ನು ತಳ್ಳಲು ಅಣಿಯಾಗಿ ನಿಂತು ಜಾಲಿಬೆಂಚಿಯ ಬಸವೇಶ್ವರ ದೇವಸ್ಥಾನದಿಂದ ತಳ್ಳಲು ಆರಂಭಿಸಿ ಪಕ್ಕದ ಎರಡು ಕಿಲೋ ಮೀಟರ್ ದೂರದ ಪೇಠ ಅಮ್ಮಾಪುರ ಗ್ರಾಮದ ಹನುಮಾನ್ ದೇವಸ್ಥಾನದ ವರೆಗೆ ಗಾಲಿ ತಳ್ಳಿ ಪಂದ್ಯ ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾನೆ.

Contact Your\'s Advertisement; 9902492681

ಪಂದ್ಯ ಗೆದ್ದ ಯುವಕ ರಾಜಮಹ್ಮದ್ ಚನ್ನೂರಗೆ ಗ್ರಾಮದ ಮುಕಂಡ ರಾಜಾ ವೆಂಕಟಪ್ಪ ನಾಯಕ (ಜೇಜಿ) ತಮ್ಮ ಗೃಹದಲ್ಲಿ ಶಾಲು ಹೊದಿಸಿ ಸನ್ಮಾನಿಸಿ ಯುವಕನ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಹಾಗು ಪಂದ್ಯ ಗೆದ್ದ ಯುವಕನಿಗೆ ಗ್ರಾಮದ ಜನರು 11 ಸಾವಿರ ರೂಪಾಯಿಗಳ ಬಹುಮಾನವನ್ನು ನೀಡಿ ಗೌರವಿಸಿದ್ದಾರೆ.

ಅಲ್ಲದೆ ಪಂದ್ಯ ಗೆದ್ದ ಯುವಕನ ಸಾಹಸಕ್ಕೆ ಪೇಠ ಅಮ್ಮಾಪುರ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನ ರಡ್ಡಿ ಮತ್ತವರ ಗೆಳೆಯರು ಹಾಗು ಅಮ್ಮಾಪುರ ಗ್ರಾಮಸ್ಥರು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here