ಸುರಪುರ: ಕರ್ನಾಟಕ ರಕ್ಷಣಾ ವೇದಿಕೆ (ಹೆಚ್.ಶಿವರಾಮೆಗೌಡ ಬಣ) ವತಿಯಿಂದ ನಗರದ ಟೈಲರ್ ಮಂಜಿಲ್‌ನಲ್ಲಿ ಮಾಜಿ ರಾಷ್ಟ್ರಪತಿ ಡಾ: ಎಪಿಜೆ ಅಬ್ದುಲ್ ಕಲಾಂ ಅವರ ೫ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಕೆ.ಪಾಶಾ ಮಾತನಾಡಿ,ಡಾ:ಎಪಿಜೆ ಅಬ್ದುಲ್ ಕಲಾಂ ಅವರ ಈ ದೇಶ ಕಂಡ ಅಪರೂಪದ ಮಹಾನ್ ನಾಯಕರಾಗಿದ್ದಾರೆ.ಅವರು ಒಬ್ಬ ರಾಷ್ಟ್ರಪತಿಯಾಗಿದ್ದರು ವಿದ್ಯಾರ್ಥಿಗಳ ಪಾಲಿನ ಪ್ರೀತಿಯ ಮೇಷ್ಟ್ರಾಗಿದ್ದರು.ಅವರು ರಾಷ್ಟ್ರಾಧ್ಯಕ್ಷರೆಂಬ ಹಮ್ಮುಬಿಮ್ಮು ಇಲ್ಲದೆ ವಿದ್ಯಾರ್ಥಿಗಳೊಂದಿಗೆ ಬರೆತು ಪಾಠ ಮಾಡುತ್ತಿದ್ದರು.ಅಲ್ಲದೆ ಅವರು ಎಂದೂ ಅಧಿಕಾರ ಅಂತಸ್ತಿಗೆ ಆಸೆ ಪಡದೆ ಇಡೀ ಜಗತ್ತಿಗೆ ಮಾದರಿಯಾದ ವ್ಯಕ್ತಿಯಾಗಿದ್ದರು ಎಂದರು.
ನಂತರ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ದಹಲಿಯ ಸುರಪುರ ತಾಲೂಕು ಘಟಕದ ಅಧ್ಯಕ್ಷ ದಾವುದ್ ಪಠಾಣ ಮಾತನಾಡಿ,ಡಾ: ಎಪಿಜೆ ಅಬ್ದುಲ್ ಕಲಾಂ ಅವರು ಒಬ್ಬ ಮಿಸೈಲ್ ಮ್ಯಾನ್ ಎಂದು ಕರೆಯಿಸಿಕೊಂಡ ಸಂಶೋಧಕ, ಪ್ರತಿಯೊಬ್ಬ ವ್ಯಕ್ತಿ ಬದುಕಿನುದ್ದಕ್ಕೂ ಕಲಿಯುವ ವಿದ್ಯಾರ್ಥಿ ಎಂದು ತಿಳಿಸಿದ ಸರಳ ಜೀವನ ನಡೆಸಿದ ಸಂತರಾಗಿದ್ದರು.ಕೇವಲ ಒಂದು ಸೂಟಕೆಸ್ ಮತ್ತು ನಾಲ್ಕು ಜತೆ ಬಟ್ಟೆಗಳೊಂದಿಗೆ ರಾಷ್ಟ್ರಪತಿ ಭವನದಲ್ಲಿದ್ದು ಇಡೀ ದೇಶದ ಜನರಿಗೆ ಸರಳತೆಯ ಪಾಠ ಮಾಡಿದ ಮಹಾನ್ ದೇಶಪ್ರೇಮಿಯಾಗಿದ್ದರು.ಅವರು ಚಿಕ್ಕ ವಯಸ್ಸಿನಲ್ಲಿ ಹಾಲು ಮತ್ತು ಪತ್ರಿಕೆ ಹಂಚುವ ಮೂಲಕ ಬದುಕು ಕಟ್ಟಿಕೊಂಡ ಅವರ ಜೀವನ ಜಗತ್ತಿನ ಎಲ್ಲಾ ಯುಕವರಿಗೆ ಮಾದರಿಯಾಗಿದೆ.ಅಂತಹ ಮಹಾನ್ ಚೇತನ ನಮ್ಮನ್ನಗಲಿ ಇಂದಿಗೆ ೫ ವರ್ಷಗಳಾಗಿದ್ದು ಅವರನ್ನು ನಾವೆಲ್ಲರು ನಿತ್ಯ ಸ್ಮರಿಸೋಣ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಡಾ:ಎಪಿಜೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೌನಾಚರಣೆ ಮೂಲಕ ಸ್ಮರಿಸಲಾಯಿತು.ಈ ಸಂದರ್ಭದಲ್ಲಿ ರಮೀಜ್ ರಾಜಾ ನಿವೃತ್ತ ಶಿಕ್ಷಕ ದೇವಿಂದ್ರಪ್ಪ ಮಹ್ಮದ್ ರಫೀಕ್ ಮಾಳೂರ ಶಿರಾಜ್ ಉಸ್ತಾದ್ ಸೇರಿದಂತೆ ಅನೇಕರಿದ್ದರು.