ಸುರಪುರ: ಕೊರೊನಾ ಹಾವಳಿಯಿಂದಾಗಿ ಶಾಲೆಗಳು ಆರಂಭವಾಗದೆ ಸತತವಾಗಿ ನಾಲ್ಕುತಿಂಗಳಿನಿಂದ ಮಕ್ಕಳು ಮನೆಯಲ್ಲಿಯೆ ಇರುವುದರಿಂದ ಶಾಲೆಯ ಪರಿಪಾಠವಿಲ್ಲದಂತಾಗಿತ್ತು ಆದರೆ ಮಕ್ಕಳನ್ನು ಕಲಿಕೆಯಲ್ಲಿರಿಸಲು ವಠಾರ ಶಾಲೆ ಆರಂಭ ಒಂದು ಒಳ್ಳೆಯ ಪ್ರಯತ್ನವಾಗಿದೆ ಎಂದು ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ಖಾದರ್ ಪಟೇಲ್ ಮಾತನಾಡಿದರು.
ನಗರದ ತಿಮ್ಮಾಪುರದ ಮಾರ್ಕಂಡೇಶ್ವರ ದೇವಸ್ಥಾನ ಆವರಣದಲ್ಲಿ ಆರಂಭವಾಗಿರುವ ವಠಾರ ಶಾಲೆಗೆ ಭೇಟಿ ನೀಡಿ ಮಾತನಾಡಿ, ತಾಲೂಕಿನಲ್ಲಿ ಒಟ್ಟು ೫೬ ಕಡೆಗಳಲ್ಲಿ ಈ ವಠಾರ ಶಾಲೆಗಳನ್ನು ತೆರೆಯಲಾಗಿದೆ ಆಯಾ ವಠಾರಗಳಲ್ಲಿರುವ ಶಾಲೆಯ ಶಿಕ್ಷಕರುಗಳು ಓಣಿಯಲ್ಲಿರುವ ದೇವಸ್ಥಾನ, ಮಸೀದಿ, ಪಾರ್ಕಗಳಂತೆ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಪ್ರಾಯೋಗಿಕವಾಗಿ ಅಲ್ಲಿ ೧೫ ರಿಂದ ೨೦ ಮಕ್ಕಳನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಪಾಠಮಾಡಲು ತಿಳಿಸಲಾಗಿದೆ ಹಾಗೆ ಮಕ್ಕಳಿಗೆ ಹಿಂದಿನ ತರಗತಿಯಲ್ಲಿ ಕಲೆತಿರುವ ಪಾಠಗಳನ್ನು ಮನನ ಮಾಡಿಸಬೇಕು ಹಾಗೂ ಅವರನ್ನು ಶಿಕ್ಷಣ ಮತ್ತು ಕಲೆಗಳಲ್ಲಿ ಆಸಕ್ತಿ ಹೆಚ್ಚಿಸುವಂತಾ ಪಾಠಗಳನ್ನು ಮಾಡಿ ಎಂದು ತಿಳಿಸಲಾಗಿದೆ.
ತಾಲೂಕಿನ ಕೆಲವುಕಡೆ ಪ್ರಾಯೋಗಿಕವಾಗಿ ವಠಾರಗಳಲ್ಲಿ ಶಾಲೆಯನ್ನು ಆರಂಬಿಸಿ ಸೇತುಬಂಧರೋಪದಲ್ಲಿ ಮಕ್ಕಳಿಗೆ ಪಾಠಮಾಡಲು ತಿಳಿಸಲಾಗಿತ್ತು ಅದರಂತೆ ಶಿಕ್ಷಕರುಕೂಡ ಉತ್ತಮವಾಗಿ ಸ್ಪಂದಿಸಿ ಮಕ್ಕಳಿಗೆ ಪಾಠಮಾಡುತ್ತಿದ್ದಾರೆ ಇನ್ನು ಕೆಲವು ದಿನಗಳಲ್ಲಿ ಈ ಕುರಿತು ಸರ್ಕಾರವು ಮಾರ್ಗಸೂಚಿಹೊರಡಿಸುವ ಸಂಭವಿದೆ. – ಮಾಧವರಡ್ಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸುರಪುರ.
ಈ ಕಾರ್ಯಕ್ರಮದಲ್ಲಿ ಶಿಕ್ಷಕರುಗಳು ಮತ್ತು ಮಕ್ಕಳು ಸ್ವಇಚ್ಛೆಯಿಂದ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಡಯಟ್ ಉಪನ್ಯಾಸಕ ಶೇಕರಪ್ಪ, ಮುಖ್ಯಗುರುಗಳಾದ ಮುದ್ದಪ್ಪ, ಸಿಆರ್‌ಪಿ ಚನ್ನಪ್ಪ.ಕೆ, ಶಿಕ್ಷಕರಾದ ಶಾಂತಾ ಎಮ್, ವೀಣಾ, ಯಾಸ್ಮೀನ್ ಇದ್ದರು.