ಕೊರೊನಾ ವಾರಿಯರ್ಸ್ ಗಳಿಗೆ ಹಡಪದ ಸಮಾಜದಿಂದ ಸನ್ಮಾನ

0
212

ಕಲಬುರಗಿ: ಜಿಲ್ಲೆಯಾದ್ಯಂತ ಕೊರೊನಾ ಸೋಂಕು ಹರಡದಂತೆ ಸಾರ್ವಜನಿಕರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುತ್ತಿರುವ ಮತ್ತು ತಮ್ಮ ಜೀವದ ಹಂಗನ್ನು ತೊರೆದು ತಮ್ಮ ಕರ್ತವ್ಯನಿಷ್ಠೆ ಮೆರೆದ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಸೇರಿದಂತೆ ಆರೋಗ್ಯ ಸಿಬ್ಬಂದಿ, ಪೌರ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರನ್ನು ಇಲ್ಲಿನ ಜಿಲ್ಲಾ ಹಡಪದ (ಕ್ಷೌರಿಕರ) ಸಮಾಜದ ವತಿಯಿಂದ ಅಧ್ಯಕ್ಷ ಈರಣ್ಣಾ ಸಿ.ಹಡಪದ ಸಣ್ಣೂರ ನೇತೃತ್ವದಲ್ಲಿ ನರದ ಬಸವೇಶ್ವರ ಪುತ್ಥಳಿ ಬಳಿ ವಿಶೇಷವಾಗಿ ಗೌರವಿಸಿ, ಮಾಸ್ಕ್, ಸ್ಯಾನಿಟೈಸರ್‌ಗಳನ್ನು ನೀಡಿದ ಕಾರ್ಯ ಜನರ ವಿಶೇಷ ಗಮನ ಸೆಳೆಯಿತು.

ನೇತೃತ್ವ ವಹಿಸಿದ್ದ ಸಮಾಜದ ಅಧ್ಯಕ್ಷ ಈರಣ್ಣ ಸಿ.ಹಡಪದ ಸಣ್ಣುರ ಮಾತನಾಡಿ, ‘ಇತಿಹಾಸ ಅವಲೋಕಿಸಿದರೆ ಯಾವ ವೈರಾಣು ಕೂಡ ಮನುಷ್ಯನನ್ನು ಗೆಲ್ಲಲ್ಲು ಸಾಧ್ಯವಾಗಿಲ್ಲ. ಈಗಲೂ ಅಷ್ಟೇ, ಕೊರೊನಾ ವೈರಸ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಖಂಡಿತಾ ಜಯ ಸಾದಿಸುತ್ತೇವೆ. ಅದಕ್ಕಾಗಿ ಒಗ್ಗಟ್ಟಿನಿಂದ ಶ್ರಮಿಸುವ ಕಾರ್ಯ ಮಾಡಬೇಕಷ್ಟೇ ಎಂದು ಮಾರ್ಮಿಕವಾಗಿ ಹೇಳಿದರು.

Contact Your\'s Advertisement; 9902492681

ಸನ್ಮಾನಿತರ ಪರವಾಗಿ ಮಾತನಾಡಿದ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಕೊರೊನಾ ಸೋಂಕಿನಿಂದ ಮುಕ್ತರಾಗಬೇಕಾದರೆ ಸ್ವಯಂ ಜಾಗೃತಿಯೊಂದೇ ದಾರಿ. ಹಾಗಾಗಿ, ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಶುಚಿತ್ವಕ್ಕೆ ಒತ್ತು ನೀಡುವಂತಹ ಆರೋಗ್ಯಕರ ಜೀವನಶೈಲಿಯನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದರು.

ಪ್ರಮುಖರಾದ ಪ್ರಭು ರಾವೂರ, ರವೀಂದ್ರಕುಮಾರ ಭಂಟನಳ್ಳಿ, ಪ್ರಭವ ಪಟ್ಟಣಕರ್, ಶರಣಬಸಪ್ಪ ನರೋಣಿ, ಬಸವರಾಜ ಹಡಪದ ಸೂಗೂರ, ಭಗವಂತ ಹೊನ್ನಕಿರಣಗಿ, ರಮೇಶ ನೀಲೂರ, ಮಲ್ಲಿನಾಥ ಸಂಗೋಳಗಿ, ಮಹಾಂತೇಶ ಇಸ್ಲಾಂಪುರೆ, ಮಲ್ಲಿಕಾರ್ಜುನ ಹಡಪದ, ಆನಂದ ಖೇಳಗಿ,  ಸುನೀಲ ಭಾಗಹಿಪ್ಪರಗಾ, ಶರಣು ರಾಜಾಪುರ, ಸಂತೋಶ ಬಗದುರಿ, ರುದ್ರಮಣಿ ಅಪ್ಪಣ ಬಟಗೇರಾ, ಸಂಗಮೇಶ ಹೊಸಳ್ಳಿ, ಚಂದ್ರು ತೊನಸನಹಳ್ಳಿ, ಮಂಜು ಅವರಾದ, ಕಂಠು ಹಡಪದ, ಪುರುಷೋತ್ತಮ್ ಹಡಪದ, ಮಲ್ಲಿಕಾರ್ಜುನ ಬನ್ನೂರ, ಸೋಮಶೇಖರ ಹಡಪದ ಕೊಂಚೂರ ಸೇರಿದಂತೆ ಸಮಾಜದ ಅನೇಕ ಮುಖಂಡರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here