ಸಂವಾದದ ಮೂಲಕ ಸಮಸ್ಯೆ ಪರಿಹಾರಕ್ಕೆ ಯತ್ನ: ಟೆಂಗಳಿ

0
125

ಕಲಬುರಗಿ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಬೆಂಗಳೂರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಗರದ ಅಂಧ ಬಾಲಕರ ಶಾಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಪುನರ್ವಸತಿ ಯೋಜನೆಯಡಿ ಜಿಲ್ಲಾ ಆಯ್ಕೆ ಸಮಿತಿಯಲ್ಲಿ ಆಯ್ಕೆಯಾದ ೨೧ ಫಲಾನುಭವಿಗಳಿಗೆ ಸಾಲ ನಿರ್ವಹಣೆ, ಲೆಕ್ಕಪತ್ರ ನಿರ್ವಹಣೆ, ಬ್ಯಾಂಕಿನ ಜೊತೆ ವ್ಯವಹರಿಸುವ ಘಟಕ ಸ್ಥಾಪನೆ ಅಗತ್ಯ ಮಾಹಿತಿ ಒದಗಿಸುವ ಒಂದು ದಿನದ ಅರಿವು ಕಾರ್ಯಕ್ರಮ ಜರುಗಿತ್ತು.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಸಮಾಜದ ತಮಟ್ಟದಲ್ಲಿರುವ ವಿಮುಕ್ತ ದೇವದಾಸಿ ಮಹಿಳೆಯರು, ದಮನಿತ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು. ಹೆಚ್.ಐ.ವಿ ಸೋಂಕಿತ ಮಹಿಳೆಯರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲೂ ವಿಶೇಷವಾಗಿ ದುರ್ಬಲ ವರ್ಗದವರ ಅಭಿವೃದ್ದಿಗಾಗಿ ಜಾರಿಯಲ್ಲಿರುವ ಯೋಜನೆಗಳು ಸಮಾಜದ ಕಟ್ಟ ಕಡೆಯ ಮಹಿಳೆಯರಿಗೆ ಸಮಾನವಾಗಿ ತಲುಪಿಸಲಾಗುತ್ತಿದೆ. ಸಮುದಾಯದವರ ಬಗೆಗಿನ ಕೀಳರಿಮೆಯನ್ನು ಹೋಗಲಾಡಿಸಲು ಸತತವಾಗಿ ಶ್ರಮಿಸಲಾಗುವುದು ಎಂದರು.

Contact Your\'s Advertisement; 9902492681

ತಾಲೂಕು ಮಟ್ಟದಲ್ಲಿ ನಿಗಮದ ಯೋಜನೆಗಳ ಅನುಷ್ಟಾನದಲ್ಲಿನ ತೊಡಕುಗಳನ್ನು ನಿವಾರಿಸಲು ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಯೋಜನೆಗಳ ಪಲಾನುಭವಿಗಳ ಸಂವಾದ ಕಾರ್ಯಕ್ರಮಗಳನ್ನು ನಡೆಸಿ ಸಮಸ್ಯೆಗಳನ್ನು ಆಲಿಸಲಾಗುವುದು. ಈಗಾಗಲೇ ಸಮೃದ್ದಿ ಯೋಜನೆಯಡಿ ಆಳಂದ ತಾಲೂಕಿನ ಮಹಿಳಾ ಬೀದಿ ವ್ಯಾಪಾರಿಗಳಿಗೆ ಕೋವಿಡ್ ಸಂಕಷ್ಟ ಪರಿಸ್ಥತಿಯಲ್ಲಿ ಆರ್ಥಿಕ ಸಹಾಯಧನ ನೀಡಲಾಗಿದೆ ಎಂದು ಹೇಳಿದರು.

ಕೋವಿಟ್-೧೯ ಹಿನ್ನೆಲೆಯಲ್ಲಿ ಯೋಜನೆಗಳಡಿಯ ೦೬ ದಿನಗಳ ಕಡ್ಡಾಯ ತರಬೇತಿಯನ್ನು ೦೧ ಕ್ಕೆ ಸೀಮಿತಗೊಳಿಸಲು ಸರ್ಕಾರದಿಂದ ವಿಶೇಷ ಅನುಮತಿ ಪಡೆದು ಅನುದಾನ ಬಿಡುಗಡೆಗೆ ಕ್ರಮವಹಿಸಲಾಗಿದೆ. ಸಾಲ ಪಡೆದ ಫಲಾನುಭವಿಗಳು ತಮ್ಮ ಭಿಕ್ಷಾಟನೆ ವೃತ್ತಿಯನ್ನು ತೊgದು, ಸಾಲದ ಸದುಪಯೋಗ ಪಡಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದಿ ಇಲಾಖೆ ಉಪ ನಿರ್ದೇಶಕ ಜಿ.ಎಸ್.ಗುಣಾರಿ ಮಾತನಾಡಿ, ಕರೋನ ಸಂಕಷ್ಟ ಪರಿಸ್ಥಿತಿಯಿರುವ ಕಾರಣ ಸಾಲದ ಹಣವನ್ನು ಸದುಪಯೋಗ ಪಡೆದು ಸಕಾಲಕ್ಕೆ ಸಾಲ ಮರುಪಾವತಿ ಮಾಡಬೇಕು ಎಂದರು.

ನಿವೃತ್ತ ಬ್ಯಾಂಕ ವ್ಯವಸ್ಥಾಪಕ ಎ.ವಿ.ಪಾಟೀಲ್, ಎಸ್.ಎಲ್.ಸಿ.ಅಫಜಲಪೂರ ಅವರು ಸಾಲ ನಿರ್ವಹಣೆ, ಘಟಕ ಸ್ಥಾಪನೆ, ಮರುಪಾವತಿ, ಕೇಂದ್ರ ಸರ್ಕಾರದ ಯೋಜನೆಗಳು, ಕ್ರೆಡಿಟ್ ಕಾರ್ಡ, ಪೋನ್ ಪೇ, ಗೂಗಲ್ ಪೇ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು.

ನಿಗಮದ ಅಭಿವೃದ್ದಿ ನಿರೀಕ್ಷಕಿ ಟಿ.ಎನ್.ಶಾಂತಲ, ಮಹಿಳಾ ಶಕ್ತಿ ಕೇಂದದ ಉಮಾ, ಪೂಜಾ, ಜೀಜಾ, ಮಾತೃ ವಂದನಾ, ಸ್ನೇಹಾ ಸೊಸೈಟಿ ಅಧ್ಯಕ್ಷೆ ಮನೀಷಾ ಚೌಹಾಣ್, ಬೀರಲಿಂಗ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here