ಗದಗ: ಬಸವತತ್ವ ಚಿಂತಕ,ಶರಣ ಸಾಹಿತಿ,ದಿಟ್ಟ ಪತ್ರಕರ್ತ ವಿಶ್ವಾರಾಧ್ಯ ಸಂತ್ಯಂಪೇಟೆ ಅವರ ಮೇಲೆ ಮಾಡಲಾದ ಕಿರಕುಳದ ಕೇಸ್ ವಾಪಸ್ಸು ಪಡೆಯಬೇಕೆಂದು ವಿವಿಧ ಸಂಘಟನೆಗಳು ಸರಕಾರಕ್ಕೆ ಆಗ್ರಹಿಸಿವೆ.
ಸತ್ಯಾಸತ್ಯತೆ ಅರಿಯದ,ಸೈದ್ಧಾಂತಿಕ ಭಿನ್ನ ನಿಲುವುಗಳನ್ನು ಅರ್ಥಮಾಡಿಕೊಳ್ಳದೇ ಅವರ ಮೇಲೆ ದಾವಣಗೆರೆ ಜಿಲ್ಲೆ,ಹೊನ್ನಾಳಿಯಲ್ಲಿ ಸರಕಾರ ಕೇಸ್ ದಾಖಲಿಸಿಕೊಂಡಿರುವುದು ಪ್ರಜಾಸತ್ತೆಯ ವಿರೋಧಿ ಕೃತ್ಯವಾಗಿದೆ.
ಇಂದು ಗದಗ ಜಿಲ್ಲಾಧಿಕಾರಿಗಳ ಮುಖಾಂತರ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ,ದಲಿತ ಸಂಘರ್ಷ ಸಮಿತಿ ಹಾಗೂ ಬಸವಪರ ಸಂಘಟನೆಗಳ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿ,ಈ ಕೂಡಲೇ ಕೇಸ್ ಹಿಂತೆಗೆಯಬೇಕೆಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಎಸ್.ಚಟ್ಟಿ,ಶೇಖಣ್ಣ ಕವಳಿಕಾಯಿ,ಮಾರ್ತಾಂಡಪ್ಪ ಹಾದಿಮನಿ,ಶರೀಫ ಬಿಳಿಯಲಿ,ಪ್ರಕಾಶ ಅಸುಂಡಿ,ಮುತ್ತು ಬಿಳಿಯಲಿ ಮತ್ತೀತರರು ಹಾಜರಿದ್ದರು.