ರಾಜಾ ಮದನಗೋಪಾಲ ನಾಯಕರಿಗೆ ದೇವರಗೋನಾಲ ಗ್ರಾಮದ ಯುವಕರ ನುಡಿನಮನ

0
31

ಸುರಪುರ: ಕಳೆದ ೨೩ನೇ ತಾರೀಖಿನಂದು ಕೊರನಾ ಸೊಂಕಿನಿಂದ ಕಲಬುರ್ಗಿ ಇಎಸ್‌ಐ ಆಸ್ಪತ್ರೆಗೆ ದಾಖಲಾಗಿ ನಂತರ ಚಿಕಿತ್ಸೆ ಫಲಿಸದೆ ೨೭ ರಂದು ಅಸ್ತಂಗತರಾದ ಮಾಜಿ ಸಚಿವ ಹಾಗು ಎಲ್ಲರ ಪ್ರೀತಿಯ ಸಾಂಸ್ಕೃತಿಕ ರಾಯಭಾರಿ ರಾಜಾ ಮದನಗೋಪಾಲ ನಾಯಕರಿಗೆ ತಾಲೂಕಿನ ದೇವರಗೋನಾಲ ಗ್ರಾಮದ ಯುವ ಸಮೂಹ ನುಡಿನಮ ಸಲ್ಲಿಸಿದರು.

ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಭೀಮರಾಯ ಮಲ್ಹಾಪುರ ಮಾತನಾಡಿ, ನಮ್ಮ ಸುರಪುರ ನಾಡಿಗೆ ರಾಜಾ ಮದನಗೋಪಾಲ ನಾಯಕರು ಸಲ್ಲಿಸಿದ ಸೇವೆ ಮತ್ತು ಕ್ರೀಡಾ ಪಟುಗಳಿಗೆ ನೀಡಿದ ಪ್ರೋತ್ಸಾಹ ಮತ್ತು ಗೋನಾಲ ಗ್ರಾಮದಲ್ಲಿ ಅವರ ಆಡಳಿತವಾಧಿಯಲ್ಲಿ ಮಾಡಿದ ಅಭಿವೃದ್ಧಿಯನ್ನು ಗ್ರಾಮದವರು ಇಂದಿಗೂ ನೆನೆಯುತ್ತೇವೆ ಹಾಗೂ ಒಬ್ಬ ರಾಜಕೀಯ, ಕ್ರೀಡಾಕ್ಷೇತ್ರ, ಸಾಹಿತ್ಯ ಮತ್ತು ಶಿಕ್ಷಣಕ್ಷೇತ್ರದಲ್ಲಿ ಇವರ ಸೇವೆ ಅನನ್ಯವಾಗಿದೆ ಇವರ ಅಗಲಿಕೆ ನೋವುತಂದಿದೆ ಎಂದರು.

Contact Your\'s Advertisement; 9902492681

ಅವರು ನಮ್ಮ ತಾಲೂಕಿನಲ್ಲಿ ನಡೆಯುವ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ತಮ್ಮದೆ ಆದ ಸಲಹೆ ಸೂಚನೆಗಳನ್ನು ನೀಡಿ ಆಯೋಜಕಿರಿಗೆ ಹುರಿದುಂಬಿಸುತ್ತಿದ್ದರು ಮೊದಲೆನೆಬಾರಿಗೆ ನಮ್ಮ ಸುರಪುರದಲ್ಲಿ ನಾಡಹಬ್ಬದ ಪರಿಕಲ್ಪನೆಯನ್ನು ಹಾಗೂ ಸುರಪುರ ಉತ್ಸವವನ್ನು ಮಾಡುವ ಅಭಿಲಾಶೆಯನ್ನು ಹೊಂದಿದ್ದರು ಎಂದು ಹೇಳಿದರು.

ಸಭೆಯ ಆರಂಭದಲ್ಲಿ ರಾಜಾ ಮದನಗೋಪಾಲ ನಾಯಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮೇಣದ ಬತ್ತಿ ಹಚ್ಚಿ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು.ಸಭೆಯಲ್ಲಿ ಶರಣಗೌಡ ಮಾಲಿಪಾಟೀಲ, ಶರಣಬಸವ ಶಹಾಪೂರಕರ್, ಮಹಾಂತೇಶ, ಈಶ್ವರ ಕೆರಿಕೋಡಿ ನಿಂಗಣ್ಣ ಬಸವಂತಪೂರ ಮಲ್ಲಿಕಾರ್ಜುನಯ್ಯ ಹಿರೇಮಠ ಲಕ್ಷ್ಮೀಕಾಂತ ಮಾತನಾಡಿದರು ಲಿಂಗಯ್ಯಸ್ವಾಮಿ, ಶಿಕ್ಷಕರಾದ ರಘವೀರ ಬಡಿಗೇರ, ಮೌನೇಶ, ಬೈರಮರಡಿ, ಹುಲಗಪ್ಪ ಪೋಲಿಸ ಪಾಟೀಲ್, ಭೀಮಣ್ಣ ಕೂಡ್ಲೂರ, ಈಶ್ವರ ಬಾಡದ, ಅನಿಲ್ ಬಹನೆಟ್ಟಿ, ಸುರೇಶ ಕಿರದಳ್ಳಿ, ದೇವು ಗುಂಟೆಪುರ, ಮೌನೇಶ ನಾಯ್ಕೋಡಿ, ಇನ್ನಿತರರಿದ್ದರು ವೀರೇಶ ಹಿರೇಮಠ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here