ಕೊರೊನಾ ಹಾವಳಿ ಮದ್ಯೆ ಸುರಪುರದಲ್ಲಿ ಸರಳವಾಗಿ ಬಕ್ರೀದ್ ಆಚರಣೆ

0
29

ಸುರಪುರ: ದೇಶದಲ್ಲಿ ಕೊರೊನಾ ವೈರಸ್ ತನ್ನ ಹಾವಳಿ ಮುಂದುವರೆಸಿರುವ ಸಂದರ್ಭದಲ್ಲಿ ತಾಲೂಕಿನಾದ್ಯಂತ ಮುಸ್ಲೀಂ ಜನತೆ ಸರಳವಾಗಿ ಬಕ್ರೀದ್ ಹಬ್ಬ ಆಚರಿಸಿದರು.ಕೋವಿಡ್-೧೯ ರ ನಿಯಮದಂತೆ ನಗರದ ಅನೇಕ ಮಜೀದ್‌ಗಳಲ್ಲಿ ಶನಿವಾರ ಬೆಳಿಗ್ಗೆ ೭ ಗಂಟೆ ಸುಮಾರಿಗೆ ಸೇರಿದ ಮುಸ್ಲೀಂ ಬಾಂಧವರು ಸರಳವಾಗಿ ಪ್ರಾರ್ಥನೆ ಸಲ್ಲಿಸಿದರು.

ಪ್ರತಿ ಮಜೀದ್‌ಗೆ ಆಗಮಿಸುವವರಿಗೆ ಮೊದಲು ಫೀವರ್ ಚೆಕ್ ನಡೆಸಿ ನಂತರ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರದಲ್ಲಿ ಕುಳಿತು ಪ್ರಾರ್ಥನೆ ಸಲ್ಲಿಸಿದರು.ಪ್ರತಿ ಮಜೀದ್‌ನಲ್ಲಿ ಸುಮಾರು ಐವತ್ತು ಜನರು ಸೇರಿದ್ದು ಕಂಡು ಬಂತು.ಎಲ್ಲರಿಗೂ ಮೌಲ್ವಿಯವರು ಕುರಾನ್ ಭೋಧಿಸಿ ನಂತರ ಕೊರೊನಾ ಕುರಿತಾದ ಜಾಗೃತಿ ಹಾಗು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಕುರಿತು ಸಂದೇಶ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾತನಾಡಿದ ದಾವೂದ್ ಪಠಾಣ್,ಪ್ರತಿ ವರ್ಷ ಬಕ್ರೀದ್ ಹಬ್ಬವನ್ನು ತುಂಬಾ ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು ಆದರೆ ಈವರ್ಷ ಇಡೀ ದೇಶಕ್ಕೆ ಕೊರೊನಾ ವೈರಸ್ ತನ್ನ ಹಾವಳಿ ಮುಂದುವರೆಸಿರುವುದರಿಂದ ಸರಕಾರ ನಿಯಮ ರೂಪಿಸಿದಂತೆ ಮಜೀದ್‌ಗಳಲ್ಲಿಯೆ ಸರಳವಾಗಿ ಪ್ರಾರ್ಥನೆ ಮೂಲಕ ಹಬ್ಬ ಆಚರಿಸುತ್ತಿದ್ದೆವೆ.
ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸಿ ದೇಶದಲ್ಲಿ ಅಟ್ಟಹಾಸ ಮುಂದುವರೆಸಿರುವ ಕೊರೊನಾ ಹಾವಳಿ ನಿರ್ಮೂಲನೆಯಾಗಲಿ ಹಾಗು ದೇಶದ ಜನತೆ ಸುಖ ಸಂತೋಷದಿಂದ ಬದುಕುವಂತಾಗಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.

ಜಲಾಲ್ ಮೊಹಲ್ಲಾದಲ್ಲಿನ ಮದೀನಾ ಮಸ್ಜೀದ್‌ನಲ್ಲಿ ಮೊಹ್ಮದ್ ಆಫೀಜ್ ಮೆಹಬೂಬ್ ಪ್ರಾರ್ಥನೆ ನಡೆಸಿಕೊಟ್ಟರು,ಸಯ್ಯದ್ ಬಂದೆ ಅಲಿ,ಅಬ್ದುಲ್ ಮತೀನ್ ಸಾಬ್,ಶಕೀಲ್ ಸೌದಾಗರ್,ಅಬ್ದುಲ್ ಖಾದರ್ ಸೌದಾಗರ್,ಅಪ್ರೋಜ್ ಸೌದಾಗರ್,ಲಾಲೂ ಪಠಾಣ್,ಅಬ್ದುಲ್ ವಾಜೀದ್,ಅಬ್ದುಲ್ ಅಜೀಜ್ ಬೇಕ್ರಿ,ಮೊಹ್ಮದ್ ಸಾದಿಕ್ ಸೌದಾಗರ್,ಮಸೂದ್ ಸೌದಾಗರ್,ಮೆಹಬೂಬ ಮುಸ್ತಾಕ್ ಸಾಬ್,ಮಹ್ಮದ್ ಜಿಲಾನಿ ಸಾಬ್ ಹಾಗು ಮೊಜಂಪುರ್ ಮಜೀದ್‌ನಲ್ಲಿ ನಡೆದ ಪ್ರಾರ್ಥನೆಯಲ್ಲಿ ಖಾಜಾ ಸಮೀಉರ್‌ಹಮಾನ್ ಅನ್ಸಾರಿ,ಎಸ್‌ಎಮ್ ಬುಖಾರಿ,ಮಹ್ಮದ್ ಸಲೀಂ ಸಾಬ್,ಅಬೀದ್ ಅಲಿ ಡಿಎಮ್ ಸಾಬ್,ಅಬೀದ್ ಹುಸೇನ್ ಪಗಡಿ,ಅಮ್ಜಾದ್ ಖಾನ್,ಮಹ್ಮದ್ ಇಕ್ಬಾಲ್ ಸಾಬ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here