ರಾಜಾ ಮದನಗೋಪಾಲ ನಾಯಕರು ನಮಗೆ ಮಾರ್ಗದರ್ಶಕರಾಗಿದ್ದರು: ಮದನ್ ಕಟ್ಟಿಮನಿ

0
20

ಸುರಪುರ: ಇಂದು ನಮ್ಮಂತೆ ಸಗರ ನಾಡಿನಲ್ಲಿಯ ಲಕ್ಷಾಂತರ ಜನ ಯುವಕರಿಗೆ ಸಮಾಜ ಸೇವೆ ಮತ್ತು ನಾಡು ನುಡಿಗಾಗಿ ಹೋರಾಟ ಮನೋಭಾವ ಬೆಳೆಯಲು ಮತ್ತು ಸಮಾಜಮುಖಿಯಾಗಿ ಚಿಂತಿಸುವ ಎಲ್ಲಾ ಯುವಕರಿಗೆ ರಾಜಾ ಮದನಗೋಪಾಲ ನಾಯಕರು ಮಾರ್ಗದರ್ಶಕರಾಗಿದ್ದರು ಎಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಮದನ್ ಕಟ್ಟಿಮನಿ ನುಡಿದರು.

ವೇದಿಕೆಯಿಂದ ಹಮ್ಮಿಕೊಂಡಿದ್ದ ಇತ್ತೀಚೆಗೆ ನಿಧನರಾದ ಸಗರ ನಾಡಿನ ಸಾಂಸ್ಕೃತಿಕ ರಾಯಭಾರಿ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕರ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ರಾಜಾ ಮದನಗೋಪಾಲ ನಾಯಕರು ಕೇವಲ ಸಾಂಸ್ಕೃತಿಕ ರಂಗಕ್ಕೆ ಮಾತ್ರ ಸೀಮಿತವಾಗಿರದೆ ಅನೇಕ ನಾಡು ನುಡಿಗಾಗಿ ನಡೆದ ಹೋರಾಟಗಳು ಮತ್ತು ರೈತರು ಕಾರ್ಮಿಕರಿಗಾಗಿ ಮತ್ತು ದೇಶದ ಅನೇಕ ಜ್ವಲಂತ ಸಮಸ್ಯೆಗಳಿಗಾಗಿ ನಡೆದ ಹೋರಾಟಗಳಲ್ಲಿ ಭಾಗವಹಿಸಿದವರು. ಅಲ್ಲದೆ ಅವರು ಸುರಪುರ ನಗರದ ಪರಿಸರ ರಕ್ಷಣೆ ಮಕ್ಕಳ ಶಿಕ್ಷಣಕ್ಕಾಗಿ ನಿರಂತರವಾಗಿ ಶ್ರಮಿಸಿದ ಮಹನಿಯರು.ಅವರ ಅಗಲಿಕೆಯಿಂದ ನಾಡು ಬಡವಾದಂತಾಗಿದೆ.ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗು ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುವುದಾಗಿ ಮಾತನಾಡಿದರು.

Contact Your\'s Advertisement; 9902492681

ಸಭೆಯ ಆರಂಭದಲ್ಲಿ ರಾಜಾ ಮದನಗೋಪಾಲ ನಾಯಕ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಎರಡು ನಿಮಿಷಗಳ ಮೌನಾಚರಣೆಯೊಂದಿಗೆ ಆತ್ಮಕ್ಕೆ ಶಾಂತಿ ಕೋರಲಾಯಿತು.ಈ ಸಂದರ್ಭದಲ್ಲಿ ಭೀಮರಾಯ ಹುಲ್ಕಲ್ ಅಮರ (ಬಾಬು) ಧರ್ಮರಾಜ್ ಅಂಬಣ್ಣ ನಾಗರಾಜ ದೇಸಾಯಿ ಬಸವರಾಜ ಮಲ್ಲಮ್ಮ ರಾಜು ಮಂಜು ಯಮನೇಶ ಮುಂದಿನಮನಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here