ದೇವರಗೋನಾಲದ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಲ್ಲಿ ದಿ.ರಾಜಾ ಮದನಗೋಪಾಲ ನಾಯಕರಿಗೆ ನುಡಿನಮನ

0
143

ಸುರಪುರ: ಜುಲೈ 27 ರಂದು ನಿಧನರಾದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕರಿಗೆ ದೇವರಗೋನಾಲದ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ವತಿಯಿಂದ ಶ್ರದ್ಧಾಂಜಲಿ ಸಭೆ ಮತ್ತು ನುಡಿನಮನ ಕಾರ್ಯಕ್ರಮ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ದೈಹಿಕ ಶಿಕ್ಷಕರಾದ ಶ್ರೀ ಭೀಮರಾಯ ಮಲ್ಲಾಪುರ ಮಾತನಾಡಿ ರಾಜಾ ಮದನಗೋಪಾಲ ನಾಯಕರ ಸಾವು ಒಪ್ಪಲಾಗುತ್ತಿಲ್ಲ, ಆದರೂ ಅನಿವಾರ್ಯ, ಅವರೊಬ್ಬ ಧೀಮಂತ ನಾಯಕ, ಕೇವಲ ರಾಜಕಾರಿಣಿಯಾಗಿ ಉಳಿಯದೆ ಎಲ್ಲ ರಂಗಗಳಿಗೂ ಕೊಡುಗೆ ನೀಡಿದ್ದಾರೆ, ಸಾಮಾಜಿಕ ಕ್ಷೇತ್ರ, ಕೃಷಿ ಕ್ಷೇತ್ರ, ಸಾಹಿತ್ಯ, ಕ್ರೀಡೆ ಹೀಗೆ ಎಲ್ಲ ರಂಗಗಳ ಏಳಿಗೆಗೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅವರನ್ನು ಕಳೆದುಕೊಂಡ ಸುರಪುರ ಬಡವಾಗಿದೆ, ಇಂದು ಅವರು ಅನೇಕ ಸಂದೇಶಗಳನ್ನು ನಮಗೆ ನೀಡಿ ಹೋಗಿದ್ದಾರೆ, ಅವರ ಮಾರ್ಗದಲ್ಲಿಯೆ ನಾವೆಲ್ಲ ನಡೆಯಬೇಕಾಗಿದೆ ಎಂದು ಅವರು ನಡೆದು ಬಂದ ದಾರಿಯನ್ನು ನೆನೆಸಿದರು.

Contact Your\'s Advertisement; 9902492681

ನಂತರ ಸಂಸ್ಥೆಯ ಅದ್ಯಕ್ಷರಾದ ಮೋನಪ್ಪ ಕಳಸರ್ ಮಾತನಾಡಿ,ರಾಜಾ ಮದನಗೋಪಾಲ ನಾಯಕರು ಅವರೊಬ್ಬ ಅಪರೂಪದ ವ್ಯಕ್ತಿಯಾಗಿದ್ದರು. ಒಂದಿಷ್ಟು ನಿಷ್ಠುರವಾಗಿದ್ದರೂ ಸದಾ ಅವರೊಳಗೊಬ್ಬ ತಾಯಿಯ ಕಾಳಜಿ ಇರುತ್ತಿತ್ತು. ನಮ್ಮ ಒಕ್ಕೂಟದ ಅದ್ಯಕ್ಷರಾಗಿ ನಮಗೆ ಅನೇಕ ಸಲಹೆ, ಸೂಚನೆಗಳನ್ನು ನೀಡುತ್ತಾ ಮುನ್ನಡೆಸುತ್ತಿದ್ದರು. ರಾಜ ಮನೆತನದವರಾಗಿದ್ದರೂ, ಮಾಜಿ ಸಚಿವರಾಗಿದ್ದರೂ ಅತ್ಯಂತ ಸರಳವಾಗಿ ಎಲ್ಲರೊಂದಿಗೂ ಬೆರೆಯುತ್ತಿದ್ದರು. ಅವರನ್ನು ಕಳೆದುಕೊಂಡ ನಾವು ನಿಜಕ್ಕೂ ನತದೃಷ್ಟರು ಎಂದು ಭಾವನಾತ್ಮಕವಾಗಿ ಮಾತನಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ರಾಜಾ ಮದನಗೋಪಾಲ ನಾಯಕರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಂತರ ಮೇಣದ ಬತ್ತಿ ಹಚ್ಚಿ ಮೌನಾಚರಣೆ ಮಾಡುವುದರ ಮೂಲಕ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಊರಿನ ಗೆಳೆಯರ ಬಳಗ, ನೌಕರರ ಬಳಗ, ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಭಾಗವಹಿದ್ದರು. ಶಾಂತಪ್ಪ ಕಳಸರ್ ಸ್ವಾಗತಿಸಿ ವಂದಿಸಿದರು. ಹಣಮಂತ ಸಿದ್ದಾಪುರ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here