ಕಾಯಕದ ಮೂಲಕ ಲೋಕಕ್ಕೆ ಗುರುತಿಸಿ ಕೊಂಡ ಮಹಾ ಶರಣ ನುಲಿಯ ಚಂದಯ್ಯ

0
66

ಸುರಪುರ: 12ನೇ ಶತಮಾನದ ಬಸವಾದಿ ಶರಣರ ಸಮಕಾಲಿನ ಶರಣರಲ್ಲಿ ನುಲಿಯ ಚಂದಯ್ಯನವರು ಒಬ್ಬರು,ಅವರು ತಮ್ಮ ಕಾಯಕದ ಮೂಲಕವೇ ಲೋಕಕ್ಕೆ ಗುರುತಿಸಿ ಕೊಂಡ ಮಹಾ ಶರಣರಾಗಿದ್ದಾರೆ ಎಂದು ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ತಾಲೂಕು ಅಧ್ಯಕ್ಷ ಖಂಡಪ್ಪ ಭಜಂತ್ರಿ ಮಾತನಾಡಿದರು.

ನಗರದ ಭಜಂತ್ರಿ ಓಣಿಯಲ್ಲಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘದಿಂದ ಹಮ್ಮಿಕೊಂಡಿದ್ದ ನುಲಿಯ ಚಂದಯ್ಯನವರ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿ,ನುಲಿಯ ಚಂದಯ್ಯ ಶರಣರು ಒಮ್ಮೆ ಹೊಲದಿಂದ ಮೇವನ್ನು ಹೊತ್ತು ತರುವಾಗಿ ಕೊರಳಲ್ಲಿನ ಇಷ್ಟಲಿಂಗ ಹರಿದು ಕೆಳಗೆ ಬೀಳಲಾಗಿ,ಆಗ ಲಿಂಗವನ್ನು ಎತ್ತಿಕೊಳ್ಳದೆ ತಮ್ಮ ತಲೆಯ ಮೇಲಿನ ಮೇವಿನ ಹೊರೆಯನ್ನೆ ಹೊತ್ತು ಕಾಯಕಕ್ಕೆ ಮಹತ್ವ ನೀಡಿದಾಗ ನೆಲಕ್ಕೆ ಬಿದ್ದ ಲಿಂಗ ತಾನೇ ಬಂದು ಅವರ ಅಂಗದ ಮೇಲೆರಿದ ಪವಾಡ ನಡೆದ ಬಗ್ಗೆ ಇಂದಿಗೂ ಶರಣರ ಸಂದೇಶದಲ್ಲಿದೆ.ಇದರಿಂದ ನುಲಿಯ ಚಂದಯ್ಯ ಶರಣರು ಕಾಯಕದ ಮಹತ್ವವನ್ನು ಲೋಕಕ್ಕೆ ತೋರಿಸಿದವರು.ಅಂತಹ ಮಹಾನ್ ಶರಣರ ಜಯಂತಿಯನ್ನು ಎಲ್ಲರು ಆಚರಿಸಬೇಕು.ಅಂದಾಗ ಬಸವಾದಿ ಶರಣರು ಎಲ್ಲರಿಗೂ ಅರ್ಥವಾಗಲು ಸಾಧ್ಯ ಎಂದರು.

Contact Your\'s Advertisement; 9902492681

ಅವರು ಕೂಡ ಲಕ್ಷಾಂತರ ಶರಣರೊಂದಿಗೆ ಅನುಭವ ಮಂಟಪದಲ್ಲಿ ಸೇರಿ ವಚನ ರಚನೆಯ ಜೊತೆಗೆ ತಮ್ಮದೆ ಆದ ಕಾಯಕವನ್ನು ಮಾಡುತ್ತಾ ಅನುಭಾವವನ್ನು ಅರಿತವರು.ಅಂತಹ ಮಹಾನ್ ಶರಣ ನಮ್ಮವರು ಎಂಬುದೆ ಹೆಮ್ಮೆಯ ಸಂಗತಿಯಾಗಿದೆ.ನಿತ್ಯ ನಾವೆಲ್ಲರು ನುಲಿಯ ಚಂದಯ್ಯನವರನ್ನು ಸ್ಮರಿಸೋಣ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ನುಲಿಯ ಚಂದಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಮಿಸಲಾಯಿತು.

ಕಾರ್ಯಕ್ರಮದಲ್ಲಿ ಸಮುದಾಯದ ಹಿರಿಯ ಮುಖಂಡ ಮಾನಪ್ಪ ಮಾಸ್ತರ ಭಜಂತ್ರಿ,ಪರಮಣ್ಣ ಭಜಂತ್ರಿ,ಯಲ್ಲಪ್ಪ ಭಜಂತ್ರಿ ಲಕ್ಷ್ಮೀಪುರ,ಬಸವರಾಜ ಭಜಂತ್ರಿ ಕುಂಬಾರಪೇಟೆ,ವೆಂಕಟೇಶ ಭಜಂತ್ರಿ,ತಿಪ್ಪಣ್ಣ ಭಜಂತ್ರಿ,ರವಿ ಭಜಂತ್ರಿ ಹಾಲಗೇರಾ,ಯಮನಪ್ಪ ಭಜಂತ್ರಿ ಹೆಗ್ಗನದೊಡ್ಡಿ,ಕೃಷ್ಣಾ ಭಜಂತ್ರಿ,ನಿಂಗಪ್ಪ ಭಜಂತ್ರಿ,ಚಂದ್ರಪ್ಪ ಭಜಂತ್ರಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here