ಆಳಂದ: ತ್ಯಾಗ, ಬಲಿದಾನ, ಸಂಘರ್ಷ ಮತ್ತು ಸಂಕಲ್ಪದಿಂದ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಇದು ನಮ್ಮ ದೇಶದ ಭವ್ಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಬಸವರಾಜ ಯಳಸಂಗಿ ಅಭಿಪ್ರಾಯಪಟ್ಟರು.
ಆಳಂದ ತಾಲ್ಲೂಕಿನ ಸುಕ್ಷೇತ್ರ ನಿಂಬರ್ಗಾ ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ, ಅಯೋಧ್ಯಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸದ ಪ್ರಯುಕ್ತ ಶ್ರೀ ರಾಮನಿಗೆ ವಿಶೇಷ ಪೂಜೆ ಹಾಗೂ ದೀಪೋತ್ಸವ ಕಾರ್ಯಕ್ರಮ ನಡೆಸಿ ಮಾತನಾಡಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾವ ರೀತಿಯಾಗಿ ಹಲವು ಜನ ಶ್ರಮ ಪಟ್ಟರೋ ಅದೇ ರೀತಿಯಾಗಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಕೋಟ್ಯಾಂತರ ಜನ ಪ್ರಾಣ ಮತ್ತು ಶ್ರಮ ಸಮರ್ಪಣೆ ಮಾಡಿದ್ದಾರೆ. ಇದರಿಂದ ಅನೇಕ ತಲೆಮಾರಿನ ಶ್ರೀ ರಾಮ ಭಕ್ತರ ಕನಸು ನನಸಾಗಿದೆ. ಮುಂದಿನ ಯುವ ಪೀಳಿಗೆಯವರು ಶ್ರೀ ರಾಮನ ಆದರ್ಶಗಳನ್ನು ಪಾಲಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಹಾದೇವ ಮಿಟೆಕಾರ,ಸಚಿನಕುಮಾರ ಶೀಲವಂತ,ಸಾಗರ ದುರ್ಗದ, ಪ್ರವೀಣ ಮಿಟೆಕಾರ, ಕ್ಷೇಮಲಿಂಗ ಕಂಭಾರ,ಮಡಿವಾಳಪ್ಪ ಮಡಿವಾಳ, ವಿನೋದಕುಮಾರ ಸ್ವಾಮಿ, ಅನಿಲ ಸ್ವಾಮಿ, ವೈಜನಾಥ ಮಾ.ಪಾಟೀಲ್,ಅನಿಲ ನಾಗುರ,ಶರಣುಗೌಡ,ಸಿದ್ದಾರಾಮ ಬಣಗಾರ ಹಾಗೂ ಅನೇಕರು ಉಪಸ್ಥಿತರಿದ್ದರು.