ಯಾದಗಿರಿ: ತಾಲ್ಲೂಕಿನ ಅರಿಕೇರಾ .ಕೆ ಗ್ರಾಮದ ಯಾದಗಿರಿ ಹೈದ್ರಾಬಾದ ಮುಖ್ಯ ರಸ್ತೆಯ ಸರ್ಕಲ್‌ನಲ್ಲಿ ಸುಮಾರು ಹತ್ತು ವರ್ಷಗಳಿಂದ ಡಾ. ಬಿ .ಆರ್ .ಅಂಬೇಡ್ಕರ್ ನಾಮ ಚೌಡಯ್ಯನವರ ಹಾಕಲಾಗಿದ್ದು, ಅದರ ಪಕ್ಕದಲ್ಲಿಯೇ ನಿಜ ಶರಣ ಅಂಬಿಗರ ಚೌಡಯ್ಯನವರ ನಾಮಫಲಕ ಹಾಕಲಾಗಿದೆ. ಒಂದು ವಾರ ಹಿಂದೆ ರಾತೋ ರಾತ್ರಿ ಹಾಕಿ ಶಾಂತಿ ಭಂಗವನ್ನು ಉಂಟು ಮಾಡಲಾಗುತ್ತಿದೆ. ಆದ್ದರಿಂದ ನಿಜಶರಣ ಅಂಬಿಗರ ಚೌಡಯ್ಯನವರ ನಾಮಫಲಕ ತೆರೆವು ಗೊಳಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣದ) ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಆಗ್ರಹಿಸಿದರು.
ಹೈದ್ರಾಬಾದ ಯಾದಗಿರಿ ಮುಖ್ಯರಸ್ತೆಯ ಅರಿಕೇರಾ ಕೆ ಗ್ರಾಮದ ಸರ್ಕಲ್‌ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಗ್ರಾಮ ಶಾಖೆವತಿಯಿಂದ ರಸ್ತೆ ತಡೆ ನಡೆಸಿ ಮಾತನಾಡಿ, ಪ್ರತಿಭಟನೆ ಸ್ಥಳಕ್ಕೆ ಯಾದಗಿರಿ ತಹಸೀಲ್ದಾರ ಚನ್ನಮಲ್ಲಪ್ಪ ಘಂಟಿಯವರು ಆಗಮಿಸಿ ಒಂದು ವಾರದ ಒಳಗೆ ನಿಜ ಶರಣ ಅಂಬಿಗರ ಚೌಡಯ್ಯನವರ ಭಾವ ಚಿತ್ರದ ನಾಮ ಫಲಕವನ್ನು ತೆರವು ಗೊಳಿಸಿ ಕ್ರಮ ಕೈಗೋಳ್ಳುವುದಾಗಿ ಭರವಸೆ ಕೊಟ್ಟಂತೆ ಒಂದು ವಾರದ ಒಳಗೆ ಕ್ರಮ ಕೈಗೊಳ್ಳದೇ ಹೋದರೆ ಮತ್ತೆ ಇದೆ ಸ್ಥಳದಲ್ಲಿ ರಸ್ತೆ ತಡೆ ಪ್ರತಿಭಟನೆ ಮಾಡಲಾಗುವದೆಂದು ತಿಳಿಸಿದರು.
ಈ ಪ್ರತಿಭಟನೆಯಲ್ಲಿ ಕೆ .ಡಾ.ಮಲ್ಲಿಕಾರ್ಜನ್ ಆಶನಾಳ ಜಿಲ್ಲಾ ಸಂಚಾಲಕರು .ಎಸ .ಡಿ. ಎಸ ಕೆ .ಎಫ್.ಕೆ ಬಸವರಾಜ ಗೋನಾಲ ತಾಲ್ಲೂಕ ಸಂಚಾಲಕರು ವಡಿಗೇರಾ ಮಲ್ಲಿಕಾರ್ಜುನ್ ಶಾಖನವರು ತಾಲ್ಲೂಕ ಸಂಘಟನಾ ಸಂಚಾಲಕರು ವಡಿಗೇರಾ ಭೀಮಣ್ಣ ಕ್ಯಾತನಾಳ ತಾಲ್ಲೂಕ ಸಂಘಟನಾ ಸಂಚಾಲಕರು ವಡಿಗೇರಾ ಮಲ್ಲಿಕಾರ್ಜುನ್ ಕುರಕುಂದಿ ಮಲ್ಲಪ್ಪ ಬಿ .ಉರುಸುಲ್ ತಾಲ್ಲೂಕ್ ಸಂಘಟನಾ ಸಂಚಾಲಕರು ಯಾದಗೀರಿ ದೇವಿಂದ್ರಪ್ಪ ಮೈಲಾಪುರ ತಾಲ್ಲೂಕ್ ಸಂಘಟನಾ ಸಂಚಾಲಕರು ಯಾದಗಿರಿ ಗೌತಮ್ ಕ್ರಾಂತಿ ತಾಲ್ಲೂಕ್ ಖಜಾಂಚಿ ವಡಿಗೇರಾ ಅರಿಕೇರಾ ಕೆ ಗ್ರಾಮದ ನೂರಾರು ಜನ ಭಾಗವಹಿಸಿದ್ದರು.