ಕಲಬುರಗಿ: ಆದಾಯ ಉತ್ಪನ್ನಕರ ಚಟುವಟಿಕೆಯಲ್ಲಿ ಆಯ್ಕೆಯಾದ ಮಾಜಿ ದೇವದಾಸಿ ಮಹಿಳಾ ಫಲಾನುಭವಿಗಳು ಅನುದಾನವನ್ನು ಉತ್ತಮ ರೀತಿಯಲ್ಲಿ ಸದ್ಭಳಕೆ ಮಾಡಿಕೊಂಡು ಮುಖ್ಯವಾಹಿನಿಗೆ ಬರಬೇಕೆಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಶಶಿಕಲಾ ಟೆಂಗಳಿ ಕರೆ ನೀಡಿದರು.
ನಗರದ ಸ್ತ್ರೀ ಶಕ್ತಿ ಭವನದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನೆ ಕಲಬುರಗಿ. ೨೦೧೯-೨೦ನೇ ಸಾಲಿನ ಎಸ್.ಸಿ, ಎಸ್.ಟಿ ಉಪಯೋಜನೆಯಡಿ ಆಯ್ಕೆಯಾದ ಮಾಜಿ ದೇವದಾಸಿಯರೀಗೆ ಆದಾಯ ಉತ್ಪನ್ನಕರ ಚಟುವಟಿಕೆ ಕುರಿತು ೧ ದಿನದ ಉದ್ಯಮಶೀಲತಾ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡುತ್ತ ದೇವದಾಸಿ ಪದ್ಧತಿಯು ಕಣ್ಣಿಗೆ ಗೋಚರವಾಗದ ಹಾಗೆ ನಡೆಯುತ್ತಿದ್ದು ಈ ಅನಿಷ್ಟ ಪದ್ಧತಿಗೆ ಯಾರು ಕೂಡಾ ಅನುಸರಿಸಬಾರದು, ಅ? ಅಲ್ಲದೆ ಕಾನೂನು ಶಿಕ್ಷೆಗೆ ಒಳಪಟ್ಟು ಜೈಲು ಶಿಕ್ಷೆ ಅನುಭವಿಸಬೇಕಾಗುತದೆ ಎಂದು ಎಚ್ಚರಿಸಿದರು.
ದೇವದಾಸಿ ಮಹಿಳೆಯರು ಆರ್ಥಿಕವಾಗಿ ಸಬಲರಾಬೇಕೆಂದು ಸರ್ಕಾರ ಸಹಾಯಧನದ ಜೊತೆ ಸಾಲಧನವನ್ನು ನೀಡಲಾಗುತಿದೆ, ಇದನ್ನು ಹೈನುಗಾರಿಕೆ, ಆಡುಸಾಕಾಣಿಕೆ, ಕಿರಾಣಿ ಅಂಗಡಿ ಇತರೆ ಲಾಭ ತರುವ ಉದ್ಯೋಗ ಮಾಡಿ, ತಮ್ಮ ಜೀವನವನ್ನು ಸುಧಾರಿಸಿಕೊಂಡು. ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೂಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ತಿಳಿಸಿದರು.
ಕಾರ್ಯಗಾರದ ಸಭೆಯಲ್ಲಿ ಉಪಸ್ಥಿತರಿದ್ದ ಯೋಜನಾಧಿಕಾರಿ ಎಸ್.ಎನ್.ಹಿರೇಮಠ ಮಾತನಾಡಿ ದೇವದಾಸಿ ಪದ್ದತಿಯು ಸಮಾಜದಲ್ಲಿ ಕಳಂಕ ತರುವದಾಗಿದು, ಈ ಪದ್ದತಿಯಿಂದ ಸಂಪೂರ್ಣವಾಗಿ ನಿರ್ನಾಮ ಮಾಡಿ ಅಂಧಕಾರದ ಆಚರಣೆಯಿಂದ ಹೋರಗೆ ಬಂದು ಸ್ವಯಂ ಉದ್ಯೋಗ ಕೈಗೊಂಡು ಸಮಾಜದಲ್ಲಿ ಉತ್ತಮ ಬದುಕನ್ನು ರೂಪಿಸಿಕೊಳ್ಳಬೆಕೆಂದು ತಿಳಿಸಿದರು, ಬದುಕಿಗೆ ಅನುಕರಣೆಯಾಗುವಂತ ಉದಾಹರಣೆ ರೂಪದಲ್ಲಿ ಪ್ರಸ್ಥಾಪಿಸಿ ನಿಗಮದ ಯೋಜನೆಗಳ ಬಗ್ಗೆ ತಿಳಸಿದರು.
ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಅಧಿಕಾರಿಗಳಾದ ತಿಪ್ಪಣ ಸಿರಸಗಿ, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷರಾದ ಮಲ್ಲಮ್ಮ, ಪತ್ರಕರ್ತ ವಿಜಯಕುಮಾರ ಜಿಡಗಿ ಸೇರಿದಂತೆ ಫಲಾನುಭವಿಗಳು ಇದ್ದರು. ನಿರೂಪಣೆಯನ್ನು ಜಗನಾಥ ನಾಟಿಕಾರ, ವಾಯ್.ಡಿ.ಬಡಿಗೇರ ಅವರು ಕಾರ್ಯಕ್ರಮ ವಂದಿಸಿದರು.