ಕಲಬುರಗಿ: ಉನ್ನತ ಹುದ್ದೆಗೆ ಎರಲ್ಲಿದ್ದೀರಿ ಅಧಿಕಾರಕ್ಕೆ ಸಿಕ್ಕಮೇಲೆ ಜನತೆ ಕೆಲಸ ಮಾಡಿ, ವಿಶೇಷವಾಗಿ ಬಡ ವರ್ಗಗಳ ಕುರಿತು ಹೆಚ್ಚಿನ ಕಾಳಜಿವಹಿಸಿ ನಿಷ್ಪಕ್ಷಪಾತವಾಗಿ ಕೆಲಸ ಮಾಡಿ ಜಿಲ್ಲೆಗೆ ಕೀರ್ತಿ ತರುವುದಲ್ಲದೆ ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಿ ಎಂದು ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿರುವ ಕುಮಾರಿ ಸ್ಪರ್ಶ ಅವರಿಗೆ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಶ್ರೀ ಗುರುಮೂರ್ತಿ ಶಿವಾಚಾರ್ಯರು ಪಾಳಾ ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಭೀಮಾಶಂಕರ ತೆಗ್ಗಳ್ಳಿ ಮಾತನಾಡಿ ಶೀಘ್ರದಲ್ಲಿ ಉನ್ನತ ಅಧಿಕಾರಿಯಾಗಲಿ ದ್ದೀರಿ ಅಧಿಕಾರ ಸ್ವೀಕರಿಸಿದ ಮೇಲೆ ಒತ್ತಡಗಳು ಬರುತ್ತಿರುತ್ತವೆ ಎಂತದೆ ಸಂದರ್ಭ ಬಂದರೂ ಸಂವಿಧಾನ ಬದ್ಧವಾಗಿ ಕೆಲಸ ಮಾಡಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿ ಕೆಲವು ಸಂದರ್ಭ ಎಂಥವರಿಗೂ ದುಷ್ಟಶಕ್ತಿಗಳು ಕಾಡುತ್ತವೆ ಅಂಥವುಗಳಿಗೆ ಲಕ್ಷಕೊಡದೆ ನ್ಯಾಯದ ಪರವಾಗಿ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಡಾ. ಶರಣ್ ಬಿ ಪಾಟೀಲ, ಸ್ಪರ್ಶ ಅವರು ಯುಪಿಎಸ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದು ನಮ್ಮ ಸಮಾಜಕ್ಕೆ ಕೀರ್ತಿ ತಂದಿದ್ದು, ಈ ಪ್ರದೇಶದಿಂದ ನಮ್ಮ ಸಮಾಜದ ಇನ್ನೂ ಹೆಚ್ಚಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವಂತೆ ಆಗಬೇಕು ಅದಕ್ಕಾಗಿ ವೀರಶೈವ ಮಹಾಸಭೆ ವತಿಯಿಂದ ಕಲ್ಬುರ್ಗಿಯಲ್ಲಿ ಐಎಎಸ್ ಕೋಚಿಂಗ್ ಸೆಂಟರ್ ತೆರೆಯುತ್ತೇವೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಮಾತನಾಡಿ ಸ್ಪರ್ಶ, ಪ್ರಯತ್ನ ಮಾಡಿದರೆ ಯಾವುದೂ ದೊಡ್ಡದಲ್ಲ ನಾಗರಿಕ ಸೇವಾ ಪರೀಕ್ಷೆ ಪಾಸ್ ಆಗಬೇಕೆಂದು ನನ್ನ ಕನಸಾಗಿತ್ತು ಇಂದು ನನಸಾಗಿದೆ ಅದಕ್ಕೆ ಸರ್ಕಾರ ನೀಡಿದ ತಂದೆ-ತಾಯಿಯರು ಬಂಧುಬಳಗದವರಿಗೆ ಇತರರಿಗೆ ನಾನು ಋಣಿಯಾಗಿದ್ದೇನೆ ಎಲ್ಲರ ವಿಶ್ವಾಸ ಗಳಿಸುವಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಸಮಾರಂಭದಲ್ಲಿ ಮಹಾಸಭೆಯ ಉಪಾಧ್ಯಕ್ಷರಾದ ಸಿದ್ದು ಪಾಟೀಲ್, ಅಬ್ಜಲ್ಪುರ್ ಕರ್, ಖಜಾಂಚಿಯಾದ ಗೌರಿ ಚಿಕೋಟಿ, ಚೆನ್ನಪ್ಪ ದಿಗ್ಗಾವಿ, ಕಾರ್ಯಕಾರಣಿ ಸದಸ್ಯರಾದ ಭೀಮಶಂಕರ್ ಮಿ ಟೇಕರ್, ಸಂತೋಷ್ ಗಂಗಸಿರಿ, ಮಹಿಳಾ ಘಟಕ ಅಧ್ಯಕ್ಷರಾದ ಡಾ. ಸುಧಾ ಹಾಳಕಾಯಿ, ಶಿವರಾಜ್ ಪಾಟೀಲ್, ಶಾಂತ ರೆಡ್ಡಿ, ತಾತ ಗೌಡ ಪಾಟೀಲ್ ಕೂಡಿ ಸೇರಿದಂತೆ ಇನ್ನಿತರರಿದ್ದರು. ಯುವ ಘಟಕ ಅಧ್ಯಕ್ಷ ಎಂ ಎಸ್ ಪಾಟೀಲ್ ನರಿಬೋಳ ನಿರೂಪಿಸಿದರು ಸೋಮಶೇಖರ್ ಮಠಪತಿ ವಂದಿಸಿದರು.